Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಚೀಫ್ ಹ್ಯಾಪಿನೆಸ್ ಆಫೀಸರ್ ಆಗಿ ನೇಮಕಗೊಂಡ ಶ್ವಾನ..! ಹೈದರಾಬಾದ್ ನ ಕಂಪನಿಯೊಂದರ ವಿಚಿತ್ರ ನಿರ್ಧಾರ..!

551

ನ್ಯೂಸ್ ನಾಟೌಟ್ : ಕಂಪನಿ ಎಂದ ಮೇಲೆ ನೂರಾರು ಹುದ್ದೆಗಳು ಇರುತ್ತವೆ. ಆಯಾಯ ಉದ್ಯೋಗಗಳಿಗೆ ಇರಬೇಕಾದ ಅರ್ಹತೆಯ ಆಧಾರದ ಮೇಲೆ ಯೋಗ್ಯ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ ನೀವೇನಾದ್ರು ಚೀಫ್ ಹ್ಯಾಪಿನೆಸ್ ಆಫೀಸರ್ ಹುದ್ದೆಯ ಬಗ್ಗೆ ಕೇಳಿದ್ದೀರಾ. ಹೌದು ಹೈದರಾಬಾದ್ ನ ಕಂಪನಿಯೊಂದು ಈ ಪೋಸ್ಟ್‌ ಗೆ ವಿಶೇಷವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದೆ.

ಉದ್ಯಮಿಯೊಬ್ಬರು ಕಂಪನಿಯಲ್ಲಿ ಹೊಸದಾಗಿ ನೇಮಕ ಮಾಡಿಕೊಂಡ ವಿಶೇಷ ಉದ್ಯೋಗಿಯಾದ ಡೆನ್ವರ್ ಹೆಸರಿನ ಶ್ವಾನದ ಕುರಿತಂತೆ ಪೋಸ್ಟ್ ವೊಂದು ಹಾಕಿದ್ದಾರೆ. ಈ ಶ್ವಾನ ಆಯ್ಕೆ ಮಾಡಿಕೊಳ್ಳುವ ಮೂಲ ಉದ್ದೇಶವೇ ಕಂಪನಿಯಲ್ಲಿರುವ ಉಳಿದ ಉದ್ಯೋಗಿಗಳ ಕೆಲಸದ ಶಕ್ತಿಯನ್ನು ಕಾಪಾಡಿಕೊಳ್ಳುವುದು ಹಾಗೂ ಸದಾ ಉತ್ಸಾಹದಿಂದ ಕೆಲಸ ಮಾಡುವಂತೆ ಮಾಡುವುದು ಆಗಿದೆ ಎನ್ನಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವರು ಮೆಚ್ಚಿಕೊಂಡಿದ್ದಾರೆ.

Ragul Arepaka ಹೆಸರಿನ ಲಿಂಕ್ಡ್ ಇನ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, “ನಮ್ಮ ಹೊಸ ನೇಮಕಗೊಂಡ ಡೆನ್ವರ್ – ಚೀಫ್ ಹ್ಯಾಪಿನೆಸ್ ಆಫೀಸರ್ ಅವರನ್ನು ಭೇಟಿ ಮಾಡಿ. ಅವರು ಕೋಡ್ ಮಾಡುವುದಿಲ್ಲ. ಅವರು ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಬರುತ್ತಾರೆ, ಎಲ್ಲರ ಹೃದಯಗಳನ್ನು ಕದಿಯುತ್ತಾರೆ ಹಾಗೂ ಎಲ್ಲಾ ಉದ್ಯೋಗಿಗಳ ಕೆಲಸದ ಶಕ್ತಿಯನ್ನು ಕಾಪಾಡಿಕೊಳ್ಳುವಂತೆ ಮಾಡುತ್ತಾರೆ. ಅಲ್ಲದೆ, ನಾವು ಈಗ ಅಧಿಕೃತವಾಗಿ ಸಾಕುಪ್ರಾಣಿ ಸ್ನೇಹಿಯಾಗಿದ್ದೇವೆ. ಇದು ನಮ್ಮ ಅತ್ಯುತ್ತಮ ನಿರ್ಧಾರ. BTW: ಈ ಉದ್ಯೋಗಿಯೂ ಕಂಪನಿಯಲ್ಲಿ ಅತ್ಯುತ್ತಮ ಸವಲತ್ತುಗಳನ್ನು ಹೊಂದಿದ್ದಾರೆ,” ಎಂದು ಬರೆದುಕೊಳ್ಳಲಾಗಿದೆ.

ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಮಲ್ ಹಾಸನ್..! ನಾನು ಕ್ಷಮೆ ಕೇಳಲ್ಲ ಎಂದ ನಟ..!

ಜೈಲಿನಲ್ಲಿ ನಿತ್ಯ ಒಂದೊಂದು ಸೌಲಭ್ಯ ನೀಡುವಂತೆ ಹರ್ಷ ಕೊಲೆ ಆರೋಪಿಗಳಿಂದ ಡಿಮ್ಯಾಂಡ್..! ಈ ಹಿಂದೆಯೂ ಕಿರಿಕ್ ಮಾಡಿ ಬೆಂಗಳೂರು, ಗುಲ್ಬರ್ಗ, ಧಾರವಾಡ ಜೈಲಿಗೆ ಸ್ಥಳಾಂತರವಾಗಿದ್ದ ಆರೋಪಿಗಳು..!

See also  ಮಂಗಳೂರಿನ ಯುವತಿ ಸುಳ್ಯಕ್ಕೆ ಬಂದು ಟ್ಯಾಬ್ಲೆಟ್ ಸೇವನೆ, ತೀವ್ರ ಅಸ್ವಸ್ಥ, ಐಸಿಯುನಲ್ಲಿ ಚಿಕಿತ್ಸೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget