ಕ್ರೈಂವೈರಲ್ ನ್ಯೂಸ್

ಚಿಕನ್ ಶವರ್ಮಾ ತಿಂದು 14ರ ಬಾಲಕಿ ದುರಂತ ಅಂತ್ಯ..! 13 ವೈದ್ಯಕೀಯ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು! ಅಷ್ಟಕ್ಕೂ ಅಲ್ಲಿ ನಡೆದದ್ದೇನು? ಪೊಲೀಸರು ಹೇಳಿದ್ದೇನು?

ನ್ಯೂಸ್ ನಾಟೌಟ್: ಹೋಟೆಲ್ ನಿಂದ ಖರೀದಿಸಿದ ಚಿಕನ್ ಶವರ್ಮಾ ತಿಂದು ಬಾಲಕಿ ಕೊನೆಯುಸಿರೆಲೆದಿದ್ದು, ಕುಟುಂಬದ ಸದಸ್ಯರೆಲ್ಲಾ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ನಗರದಲ್ಲಿ ನಡೆದಿದೆ.

ಕೊನೆಯುಸಿರೆಳೆದ ಬಾಲಕಿಯನ್ನು ಡಿ.ಕಲೈಯರಸಿ(14) ಎಂದು ಗುರುತಿಸಲಾಗಿದೆ ಈ ಘಟನೆ ನಿನ್ನೆ ಸಂಜೆ(ಸೆ.21) ಕ್ಕೆ ನಡೆದಿದೆ.

ಬಾಲಕಿ ಪೊಷಕರು ಹೋಟೆಲ್‌ನಿಂದ ಚಿಕನ್ ಶವರ್ಮಾ ಮತ್ತು ಇತರ ಆಹಾರವನ್ನು ಖರೀದಿಸಿ ಮನೆಗೆ ತಂದು ತಿಂದಿದ್ದಾರೆ. ಶವರ್ಮಾ ತಿಂದವರೆಲ್ಲರಿಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ಸ್ವಲ್ಪ ಸಮಯದ ನಂತರ ಎಲ್ಲರೂ ವಾಂತಿವಾಗಿದೆ. ಕೂಡಲೇ ಅವರೆಲ್ಲರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯರು ಚಿಕಿತ್ಸೆ ನೀಡುತ್ತಿದ್ದ ವೇಳೆ ಕಲೈರಸಿ ದುರಂತ ಅಂತ್ಯ ಕಂಡಿದ್ದು, ಕುಟುಂಬದ ಇತರ ಸದಸ್ಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ಕಳುಹಿಸಲಾಗಿದೆ.ಈ ಹೋಟೆಲ್ ನಲ್ಲಿ ಗ್ರಿಲ್ಡ್ ಚಿಕನ್, ತಂದೂರಿ ಚಿಕನ್ ಅಥವಾ ಶವರ್ಮಾ ತಿಂದು ಆರೋಗ್ಯದಲ್ಲಿ ಏರುಪೇರು ಕಂಡಿದೆ. ಆದ್ದರಿಂದ ಇಲ್ಲಿ ಬಳಸಲಾಗಿದ್ದ ಮಾಂಸವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುಟುಂಬ ಶವರ್ಮಾ ಆರ್ಡರ್ ಮಾಡಿದ ಹೋಟೆಲ್ ನಿಂದ 13 ವೈದ್ಯಕೀಯ ವಿದ್ಯಾರ್ಥಿಗಳೂ ಶವರ್ಮಾ ಖರೀದಿಸಿದ್ದಾರೆ. ಇವರು ಕೂಡ ಅಸ್ವಸ್ಥಗೊಂಡು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಈ ಹೋಟೆಲ್ ವಿರುದ್ಧ ದೂರು ದಾಖಲಾಗಿದ್ದು, ಅಧಿಕಾರಿಗಳು ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ ಕೆಲವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

https://www.youtube.com/watch?v=pw95EAmlpP8

Related posts

ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಶಿಕ್ಷಕಿಗೆ ಹೃದಯಾಘಾತ..! ಕೊನೆಯುಸಿರೆಳೆದ ಶಿಕ್ಷಕಿ ಬಗ್ಗೆ ಚುನಾವಣಾಧಿಕಾರಿ ಹೇಳಿದ್ದೇನು..?

ಬಸ್‌- ಕಾರು ಡಿಕ್ಕಿಯಾಗಿ 30 ಮಂದಿ ಸಾವು

ಭದ್ರತಾ ಪಡೆಗಳ ಗುಂಡಿಗೆ 7 ನಕ್ಸಲರು ಬಲಿ..! ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಂಡ ಪೊಲೀಸ್