ಕರಾವಳಿ

ಸಾವಿತ್ರಕ್ಕ ಸಾಕಿದ್ದ ಕೋಳಿಗಳೆಲ್ಲ ನೀರು ಪಾಲು..!

600

ನ್ಯೂಸ್ ನಾಟೌಟ್: ಜೀವನದಲ್ಲಿ ನನ್ನ ಕೈಯಿಂದ ಆದ ಸಂಪಾದನೆಯನ್ನು ನಾನೇ ಮಾಡಬೇಕು ಎಂದು ಹಠಕಟ್ಟಿಕೊಂಡಿದ್ದ ಮಹಿಳೆಯೊಬ್ಬರು ಇತ್ತೀಚೆಗಷ್ಟೇ ಕುಕ್ಕುಟೋದ್ಯಮ ಆರಂಭಿಸಿದ್ದರು. ಆದರೆ ಅವರ ಕನಸುಗಳೆಲ್ಲ ತಡರಾತ್ರಿ ಸುರಿದ ಮಳೆಗೆ ಕೊಚ್ಚಿಕೊಂಡು ಹೋಗಿದೆ.

ಹೌದು, ಸಂಪಾಜೆ ಗ್ರಾಮದ ಚೌಕಿ ಸಮೀಪದ ಗಣೇಶ್ ಪಿಟ್ಟರ್ ಅವರ ಪತ್ನಿ ಸಾವಿತ್ರಿ ಅವರು ನಲವತ್ತಕ್ಕೂ ಹೆಚ್ಚು ಊರು ಕೋಳಿಗಳನ್ನು ಸಾಕಿದ್ದರು. ಆದರೆ ಭಾರಿ ಪ್ರವಾಹಕ್ಕೆ ಗೂಡು ಸಮೇತ ನೀರು ಪಾಲಾಗಿದೆ. ಒಂದು ಕಡೆ ಸಾವಿತ್ರಕ್ಕೆ ಅವರ ಕನಸಿನ ಮನೆಯೂ ನೀರಿನ ರಭಸಕ್ಕೆ ಸಿಲುಕಿ ಕೆಸರಿನಿಂದ ನಲುಗಿ ಹೋಗಿದೆ. ಮತ್ತೊಂದು ಕಡೆ ಅವರು ಸಾಕಿದ ಕೋಳಿಗಳೂ ನೀರು ಪಾಲಾಗಿದೆ. ಈಗ ಅವರ ಕುಟುಂಬಕ್ಕೆ ಕಣ್ಣೀರಿನಿಂದ ಕೈ ತೊಳೆಯುವಂತಾಗಿದೆ.

ಕಲ್ಲುಗುಂಡಿಯಲ್ಲಿ ೨ ಚಿಕನ್ ಸೆಂಟರ್‌ಗೂ ನೀರು ನುಗ್ಗಿದ್ದ ಸಾವಿರಾರು ರೂ. ನಷ್ಟವಾಗಿದೆ ಎಂದು ತಿಳಿದು ಬಂದಿದೆ.

chicken,farm,lost,flood

See also  ಸ್ನಾನಕ್ಕೆ ತೆರಳಿದ್ದ ವಿದ್ಯಾರ್ಥಿ ಕುಸಿದು ಬಿದ್ದು ಸಾವು, ಮಂಗಳೂರಲ್ಲೊಂದು ಹೃದಯ ವಿದ್ರಾವಕ ಘಟನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget