ದೇಶ-ಪ್ರಪಂಚ

ಬಲಿಕೊಟ್ಟ ಮೇಕೆ ಮಾಂಸ ತಿನ್ನುವಾಗಲೇ ಹೋಯಿತು ವ್ಯಕ್ತಿಯ ಪ್ರಾಣಪಕ್ಷಿ,ಘಟನೆಗೆ ಕಾರಣವೇನು?

ನ್ಯೂಸ್ ನಾಟೌಟ್ : ದೇವರಿಗೆ ಬಲಿಕೊಟ್ಟ ಮೇಕೆಯಿಂದಲೇ ವ್ಯಕ್ತಿಯೊಬ್ಬನ ಪ್ರಾಣಪಕ್ಷಿ ಹಾರಿ ಹೋಗಿರುವ ಘಟನೆ ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.ಬಗರ್ ಸಾಯಿ (50) ಎಂಬ ವ್ಯಕ್ತಿ ಮೃತ ದುರ್ದೈವಿ.

ತನ್ನ ಇಷ್ಟಾರ್ಥ ನೆರವೇರಲಿ ಎಂದು ಬೇಡಿದ ಆ ವ್ಯಕ್ತಿ ಮೇಕೆಯನ್ನು ಬಲಿ ಕೊಡುವುದಾಗಿ ಹರಕೆ ಹೇಲಿಕೊಂಡಿದ್ದರು. ಅದರಂತೆ ಇಷ್ಟಾರ್ಥ ನೆರವೇರಿದ ನಂತರ ಭಾನುವಾರ ( ಜು.2 ರಂದು) ಮೇಕೆಯನ್ನು ಹಿಡಿದುಕೊಂಡು ಮದನ್‌ಪುರ ಗ್ರಾಮದ ನಿವಾಸಿಗಳೊಂದಿಗೆ ಖೋಪಾಧಾಮ್‌ಗೆ ತೆರಳಿ ಅಲ್ಲಿ ಮೇಕೆಯನ್ನು ಬಲಿ ಕೊಟ್ಟಿದ್ದಾರೆ.

ಗ್ರಾಮಸ್ಥರು ಹಾಗೂ ಬಲಿಕೊಟ್ಟ ವ್ಯಕ್ತಿ ಸೇರಿ ಅದರ ಮಾಂಸವನ್ನು ಬೇಯಿಸಿ ಊಟಕ್ಕೆ ಕುಳಿತಿದ್ದಾರೆ. ಈ ವೇಳೆ ಬಗರ್‌ ಸಾಯಿ ಅವರಿಗೆ ಮಾಂಸದಿಂದ ಮೇಕೆಯ ಕಣ್ಣು ಸಿಕ್ಕಿದ್ದು, ನುಂಗಲು ಯತ್ನಿಸಿದ್ದು ಆದರೂ ಅವರ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಕೂಡಲೇ ಅವರನ್ನು  ಊಟದ ಜಾಗದಿಂದಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತಾದರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Related posts

ಬಾಹುಬಲಿ ಖ್ಯಾತಿಯ ಕಟ್ಟಪ್ಪನಿಗೆ ಕರೋನಾ ಸೋಂಕು

11 ವರ್ಷದಲ್ಲೇ ವಿಶ್ವದ ಮೇಧಾವಿ ವಿದ್ಯಾರ್ಥಿ ಭಾರತೀಯ ಮೂಲದ ಅಮೆರಿಕನ್ ಬಾಲಕಿ

ತಾನು ಪ್ರೀತಿಯಿಂದ ಸಾಕಿದ ಹುಂಜಗಳ ರಕ್ಷಣೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ