ದೇಶ-ಪ್ರಪಂಚ

ವಿಮಾನ ನಿಲ್ದಾಣದ ನೆಲದಲ್ಲಿ ಕುಳಿತು ಚತ್ತೀಸ್ ಗಢ ಸಿಎಂ ಪ್ರತಿಭಟನೆ

ಲಖನೌ: ಲಖಿಂಪುರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ನಾನು ಆಚೆ ಹೋಗು ತ್ತಿಲ್ಲ. ಹೀಗಾಗಿ ನಿಮ್ಮ ಸಮಸ್ಯೆ ಏನು? ನನ್ನನ್ನು ಏಕೆ ತಡೆದಿದ್ದೀರಿ ಎಂದು ಚತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದ ಲಖಿಂಪುರ ಜಿಲ್ಲೆಯಲ್ಲಿ ಎಂಟು ಮಂದಿ ಮೃತಪಟ್ಟ ಘಟನೆ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಡುವೆಯೇ ಬಘೇಲ್ ಅವರನ್ನು ರಾಜ್ಯ ಪೊಲೀಸರು ಮಂಗಳವಾರ ತಡೆದಿದ್ದಾರೆ.ಭೂಪೇಶ್ ಬಘೇಲ್ ಅವರು ಪೊಲೀಸರ ಕ್ರಮ ವಿರೋಧಿಸಿ ಲಕ್ನೋ ವಿಮಾನ ನಿಲ್ದಾಣದ ಹೊರಗೆ ನೆಲದ ಮೇಲೆ ಕುಳಿತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಸೀತಾಪುರದಲ್ಲಿ ಪೊಲೀಸ್ ವಶದಲ್ಲಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾಗಲು ನಾನು ಬಯಸಿದ್ದೆ ಎಂದು ಬಘೇಲ್ ಹೇಳಿದರು. ಯಾವುದೇ ಆದೇಶವಿಲ್ಲದೆ, ನನ್ನನ್ನು ಲಕ್ನೋ ವಿಮಾನ ನಿಲ್ದಾಣದ ಹೊರಗೆ ನಿಲ್ಲಿಸಲಾಗಿದೆ ಎಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ನಾಯಕ ಹಿಂದಿಯಲ್ಲಿ ಬರೆದಿದ್ದಾರೆ.

Related posts

ನ್ಯೂಸ್‌ ಓದುತ್ತಲೇ ಕುಸಿದು ಬಿದ್ದ ನಿರೂಪಕಿ! ಇಲ್ಲಿದೆ ವಿಡಿಯೋ

ಹಕ್ಕಿಜ್ವರದ ಆತಂಕ, ಭಾರತದಲ್ಲಿ ಮನುಷ್ಯರಿಗೂ ಹರಡುವ ಭೀತಿ, ಏನಂದ್ರು ಆರೋಗ್ಯ ತಜ್ಞರು?

ಪಾಕ್ ನಲ್ಲಿ ತೀವ್ರ ಆಹಾರ ಬಿಕ್ಕಟ್ಟು: ಆಹಾರ ಧಾನ್ಯ ವಿತರಣೆಯಲ್ಲಿ ನೂಕು-ನುಗ್ಗಲು, ಜನರನ್ನು ಚರಂಡಿಗೆ ತಳ್ಳಿದ ವ್ಯಕ್ತಿ! ವಿಡಿಯೋ ವೈರಲ್