Latestಕರಾವಳಿ

ಗುತ್ತಿಗಾರು: ಚೆಸ್ ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗಾಗಿ ಚೆಸ್ ತರಬೇತಿ ಕಾರ್ಯಾಗಾರ;ಯಾವಾಗ?ಎಲ್ಲಿ?ಇಲ್ಲಿದೆ ಮಾಹಿತಿ

339

ನ್ಯೂಸ್‌ ನಾಟೌಟ್:ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ) ಗುತ್ತಿಗಾರು ವತಿಯಿಂದ “ಚೆಸ್”ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಚೆಸ್ ನುರಿತ ಶಿಕ್ಷಕರಿಂದ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.

ಲವಲವಿಕೆ ಹಾಗೂ ಚುರುಕುತನದ ಯಶಸ್ವಿ, ಮೊಬೈಲ್ ಬಳಕೆಯಿಂದ ದೂರವಿರಿಸುವಿಕೆಯ ಪ್ರಯತ್ನದ ಕಲ್ಪನೆಯೊಂದಿಗೆ ಪ. ವರ್ಗದ ಸಭಾ ಭವನ,ಗ್ರಾಮ ಪಂಚಾಯತ್ ಗುತ್ತಿಗಾರು ಇಲ್ಲಿ ವಿದ್ಯಾರ್ಥಿಗಳು ಒಟ್ಟಾಗಲಿದ್ದಾರೆ.ಮೇ.೫ರಂದು ಈ ಕಾರ್ಯಗಾರವು ಪ್ರಾರಂಭವಾಗಲಿದ್ದು, ಬೆಳಿಗ್ಗೆ 9ರಿಂದ ಮದ್ಯಾಹ್ನ 1ರವರೆಗೆ, 4ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳ ಪೋಷಕರು ಈ ನಂಬರ್‌ ಗೆ ಕರೆ ಮಾಡಬಹುದು- 7892948475 9686987113.

See also  ಸುಳ್ಯ ತಾಲೂಕಿನ ಸಾಹಿತ್ಯ ಪ್ರಿಯರಿಗೆ ಸಂಭ್ರಮದ ದಿನ, ವಿಧಾನಸೌಧದಲ್ಲಿ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ. ಪುರುಷೋತ್ತಮ ಬಿಳಿಮಲೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget