ಕರಾವಳಿಕೊಡಗುವಿಡಿಯೋವೈರಲ್ ನ್ಯೂಸ್

ಚೆಂಬು: ‘ನಮಗೆ ಯಾವ ಧನ್ಯವಾದವೂ ಬೇಡ, ಪ್ರಣವ ಫೌಂಡೇಷನ್ ಗೆ ದೊಡ್ಡ ಧನ್ಯವಾದಗಳನ್ನು ಸಲ್ಲಿಸಿ, ‘ಬೆಳಕು’ ಕಾರ್ಯಕ್ರಮದ ಮೂಲಕ ಅತ್ಯಾಡಿ ಜನರ ಬದುಕು ಬೆಳಗಿದ ಪಬ್ಲಿಕ್ ಟಿವಿ ಎಚ್ .ಆರ್ ರಂಗನಾಥ್ ಹೇಳಿಕೆ, ವಿಡಿಯೋ ವೀಕ್ಷಿಸಿ

76
Spread the love

ನ್ಯೂಸ್ ನಾಟೌಟ್: ಖ್ಯಾತ ಪತ್ರಕರ್ತ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್ .ಆರ್ ರಂಗನಾಥ್ ಅವರ ‘ಬೆಳಕು’ ಶೀರ್ಷಿಕೆಯಡಿಯಲ್ಲಿ ಪ್ರಸಾರವಾಗುತ್ತಿರುವ ಸಾಮಾಜಿಕ ಕಾರ್ಯಕ್ರಮದಿಂದ ಒಂದು ಇಡೀ ಊರಿನ ಸೇತುವೆಯ ಸಮಸ್ಯೆ ಬಗೆಹರಿದಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಆನೆಹಳ್ಳ ಬಳಿ ಸೇತುವೆ ಶಿಥಿಲಗೊಂಡಿತ್ತು. ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ತಿಂಗಳ ಹಿಂದೆ ಕಾರ್ಯಕ್ರಮ ನಡೆದಿತ್ತು. ತಿಂಗಳ ಹಿಂದೆ ಆ ಭಾಗದ ಶಾಸಕ ಪೊನ್ನಣ್ಣ ಜೊತೆಗೆ ಮಾತನಾಡಿದ್ದ ರಂಗನಾಥ್ ಅವರು ಜನರ ನೋವಿಗೆ ಸ್ಪಂದಿಸುವಂತೆ ತಿಳಿಸಿದ್ದರು. ಇದಾದ ಬಳಿಕ ಪ್ರಣವ ಪೌಂಡೇಷನ್ ಮೂಲಕ ಸೇತುವೆ ನಿರ್ಮಿಸುವಲ್ಲಿ ಪಬ್ಲಿಕ್ ಟಿವಿ ಯಶಸ್ವಿಯಾಗಿದೆ. ಇದೀಗ ಆ ಭಾಗದ ಜನರು ತುಂಬಾ ಸಂತೋಷಗೊಂಡು ರಂಗನಾಥ್ ಅವರಿಗೆ ಧನ್ಯವಾದಗಳನ್ನು ಹೇಳಿದೆ. ಈ ಬಗ್ಗೆ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿರುವ ಎಚ್ .ಆರ್ ರಂಗನಾಥ್ ಅವರು, ನಮಗೆ ಯಾವ ಧನ್ಯವಾದವೂ ಬೇಡ, ಪ್ರಣವ ಫೌಂಡೇಷನ್ ಗೆ ದೊಡ್ಡ ಧನ್ಯವಾದಗಳನ್ನು ಸಲ್ಲಿಸಿ’ ಎಂದು ತಿಳಿಸುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

See also  ನಿಮ್ಗೆ ತಾಕತ್ತಿದ್ದರೆ ಬಜರಂಗದಳ ಬ್ಯಾನ್ ಮಾಡಿ ನೋಡೋಣ...ಕಾಂಗ್ರೆಸ್ ಗೆ ಪ್ರಮೋದ್ ಮುತಾಲಿಕ್ ಸವಾಲು
  Ad Widget   Ad Widget   Ad Widget   Ad Widget   Ad Widget   Ad Widget