ಕರಾವಳಿಕ್ರೈಂಸುಳ್ಯ

ಚೆಂಬು: ಕೇವಲ 21 ವರ್ಷಕ್ಕೆ ಬದುಕಿನ ಪಯಣ ಮುಗಿಸಿದ ಹುಡುಗ..!, ಪೆರಾಜೆ ಬಳಿ ಯಮನಾಗಿ ಬಂದ ಆಟೋ ರಿಕ್ಷಾ

ನ್ಯೂಸ್‌ ನಾಟೌಟ್: ಕೆಲವು ಸಲ ಬದುಕು ಅನಿಶ್ಚಿತತೆ ಆಗಿ ಬಿಡಬಹುದು. ಈಗಿದ್ದವ ಮರು ಕ್ಷಣ ಇಲ್ಲದಾಗಬಹುದು. ಮನುಷ್ಯನ ಜೀವನ ಅಂದ್ರೆನೇ ಹಾಗೆ. ಒಮ್ಮೊಮ್ಮೆ ನಾವು ಅಂದುಕೊಳ್ಳದ್ದು ಪರಿಸ್ಥಿತಿಯ ಕೈ ಮೀರಿ ನಡೆದು ಬಿಡುತ್ತೆ.

ಅಂತಹುದೇ ಒಂದು ದುರ್ಘಟನೆ ಕೊಡಗು ಜಿಲ್ಲೆಯ ಚೆಂಬು ಗ್ರಾಮದ ಕುದುರೆಪಾಯದ ಯುವಕನ ಬಾಳಲ್ಲಿಯೂ ನಡೆದು ಬಿಟ್ಟಿದೆ.
ಕುದುರೆಪಾಯದ ನವಿನ್ ಎಂಬ ಯುವಕ ಕೇವಲ 21 ವರ್ಷಕ್ಕೆ ಬದುಕಿನ ಪ್ರಯಾಣ ಮುಗಿಸಿದರು. ಬದುಕಿನ ಸುಂದರ ದಿನಗಳ ಕನಸು ಕಾಣುತ್ತಿದ್ದ ಯುವಕ ಪೆರಾಜೆಯ ಕಲ್ಚರ್ಪೆಯ ಬಳಿ ನಡೆದ ಭೀಕರ ಅಪಘಾತದಲ್ಲಿ ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ.

ನವಿನ್ ಸ್ಕೂಟಿ ಏರಿ ಹೊರಟಿದ್ದರು. ಈ ವೇಳೆ ಪೆರಾಜೆಯ ಕಲ್ಚರ್ಪೆಯ ಬಳಿ ಆಟೋ ರಿಕ್ಷಾವೊಂದು ಇದ್ದಕ್ಕಿದ್ದಂತೆ ರಸ್ತೆಗೆ ಕಟ್‌ ತೆಗೆದುಕೊಂಡಿದೆ. ಪರಿಣಾಮ ನವಿನ್ ಕತ್ತಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಹೆಲ್ಮೆಟ್‌ ಧರಿಸಿದ್ದರೂ ಕತ್ತಿನ ಭಾಗ ಸೀಳಿ ಹೋಗಿದೆ. ತಕ್ಷಣ ಯುವಕನನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ ಆತ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾನೆ. ಸೆ.7ರಂದು ರಾತ್ರಿ ಮಗನ ಸಾವಿನ ಸುದ್ದಿ ತಿಳಿದು ಮನೆಯವರು ಓಡೋಡಿ ಆಸ್ಪತ್ರೆಗೆ ಬಂದರು.

ತಾಯಿಯಂತೂ ಆಸ್ಪತ್ರೆಯ ತುರ್ತು ನಿಗಾ ಘಟಕದ ಎದುರು ಕುಳಿತು ಬಿಕ್ಕಿಬಿಕ್ಕಿ ಅಳುತ್ತಿದ್ದರು. ಮಗನಿಗೆ ಕೆಲಸ ನಿಗದಿಯಾಗಿತ್ತು, ಆತ ಉದ್ಯೋಗಕ್ಕೆ ಹೊರಡುವ ಖುಷಿಯಲ್ಲಿದ್ದ, ಈ ಸಂದರ್ಭದಲ್ಲಿ ದೇವರು ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ ಎಂದು ತಾಯಿ ಕಣ್ಣೀರಾದರು. ಸುತ್ತಲು ನೆರೆದಿದ್ದ ಜನರ ಕಣ್ಣಾಲಿಗಳು ತೇವಗೊಂಡವು. ಕುದುರೆಪಾಯದ ಈ ಯುವಕನಿಗೆ ಇಬ್ಬರು ಸಹೋದರಿಯರಿದ್ದಾರೆ. ಯುವಕನಿಗೆ ಇನ್ಸ್ಟಾಗ್ರಾಮ್‌ ನಲ್ಲಿ ರೀಲ್ಸ್‌ ಮಾಡುವ ಕ್ರೇಜ್‌ ಇತ್ತು. ಅದರಲ್ಲೂ ಬೈಕ್‌ ಏರುವ ಹವ್ಯಾಸವಿತ್ತು. ಏನೇ ಇದ್ದರೂ ಈಗ ನವಿನ್ ಎಲ್ಲರ ಪಾಲಿಗೆ ನೆನಪಾಗಿಯೇ ಉಳಿದುಬಿಟ್ಟಿದ್ದಾನೆ.

Related posts

ಯಮಹಾ ಬೈಕ್ ಶೋರೂಂಗೆ ಬೆಂಕಿ..! ಸುಟ್ಟು ಭಸ್ಮವಾದ 50ಕ್ಕೂ ಹೆಚ್ಚು ಬೈಕ್‍ ಗಳು..!

ವೆನ್ಲಾಕ್ ಆಸ್ಪತ್ರೆ ಸಹಭಾಗಿತ್ವದಲ್ಲಿ ಕಲ್ಲುಗುಂಡಿಯಲ್ಲಿ ರಕ್ತದಾನ ಶಿಬಿರ

ಕಲ್ಮಡ್ಕ: ಕಾಚಿಲ ಶ್ರೀಮಹಾವಿಷ್ಣುಮೂರ್ತಿ ದೈವಸ್ಥಾನ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ ನಡಾವಳಿ, ಸಾವಿರಾರು ಜನ ಸೇರುವ ನಿರೀಕ್ಷೆ