ಮಡಿಕೇರಿ: ಕೊಡಗು ಜಿಲ್ಲೆಯ ಚೆಂಬು ಗ್ರಾಂ,ಪಂ.ವ್ಯಾಪ್ತಿಯ ದಬ್ಬಡ್ಕ ಮೂರನೇ ವಾರ್ಡ್ ಗಾಗಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಧಾ ಚಂಗಪ್ಪ ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಕೆ.ಕೆ.ಮಹಾಲಕ್ಷ್ಮೀ ಸೋಲು ಅನುಭವಿಸಿದ್ದಾರೆ. ಒಟ್ಟು 988 ಮತದಾರರಲ್ಲಿ 745 ಮಂದಿ ಮತ ಚಲಾಯಿಸಿದ್ದು ರಾಧಾ ಚಂಗಪ್ಪ 455 ಮತ ಪಡೆದರೆ ಕೆ.ಕೆ.ಮಹಾಲಕ್ಷ್ಮೀ 268 ಮತಗಳನ್ನು ಪಡೆದುಕೊಂಡರು.