ಕೊಡಗುಕ್ರೈಂಸುಳ್ಯ

ಚೆಂಬು: ಆಸ್ತಿಗಾಗಿ ಗಲಾಟೆ, ಸಹೋದರನನ್ನೇ ಭೀಕರವಾಗಿ ಚೂರಿಯಿಂದ ಚುಚ್ಚಿ ಕೊಲೆ

306

ನ್ಯೂಸ್ ನಾಟೌಟ್: ಆಸ್ತಿಗಾಗಿ ಸಹೋದರರ ನಡುವೆ ಗಲಾಟೆ ನಡೆದಿದ್ದು ಕೊಡಗು ಜಿಲ್ಲೆಯ ಚೆಂಬು ಗ್ರಾಮದಲ್ಲಿ ಓರ್ವನ ಹೆಣವೇ ಬಿದ್ದಿದೆ.

ಮೃತರಾದವರನ್ನು ಉಸ್ಮಾನ್ ಎಂದು ಗುರುತಿಸಲಾಗಿದೆ.

ಶುಕ್ರವಾರ ಇವರು ಚೆಂಬು ಗ್ರಾಮದ ಕುದ್ರೆಪಾಯದ ಸಮೀಪ ಇರುವ ಜಾಗಕ್ಕೆ ಹೋಗಿದ್ದರು. ಈ ವೇಳೆ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದಿದೆ. ತೀವ್ರ ಚರ್ಚೆ ನಡೆದು ಕೋಪದ ತೀವ್ರತೆಯಲ್ಲಿ ಚಾಕುವಿನಿಂದ ಉಸ್ಮಾನ್ ಅವರಿಗೆ ಚುಚ್ಚಲಾಗಿದೆ. ಈ ವೇಳೆ ಗಂಭೀರ ಗಾಯಗೊಂಡು ಅವರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಉಸ್ಮಾನ್ ಕುದ್ರೆಪಾಯದಲ್ಲಿ ಭೂಮಿ ಹೊಂದಿದ್ದರು. ಅರಂತೋಡಿನಲ್ಲೂ ಇವರಿಗೆ ಜಾಗವಿದೆ ಎಂದು ತಿಳಿದು ಬಂದಿದೆ. ಸದ್ಯ ಇವರು ಪುತ್ತೂರಿನ ಸಂಪ್ಯದಲ್ಲಿ ನೆಲೆಸಿದ್ದರು ಎನ್ನಲಾಗುತ್ತಿದೆ. ಕೊಡಗು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

See also  ಸುಳ್ಯ ನೂತನ ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಸತ್ಯನಾರಾಯಣ ಕೆ .ನೇಮಕ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget