ಸಂಪಾಜೆ: ಚೆಂಬು ಗ್ರಾಮದ ಜೀಪು ಚಾಲಕ ಶ್ರೀಧರ್ ಅನ್ನುವವರು ಇಂದು ನಿಧನರಾಗಿದ್ದಾರೆ. 40 ವರ್ಷದ ಶ್ರೀಧರ್ ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶ್ರೀಧರ್ ಬಹಳಷ್ಟು ವರ್ಷಗಳ ಕಾಲ ಸಂಪಾಜೆಯ ಕಲ್ಲುಗುಂಡಿಯಲ್ಲಿ ಜೀಪು ಚಾಲಕರಾಗಿ ಕೆಲಸ ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರು ಚೆಂಬು ಗ್ರಾಮ ಕುದರೆಪಾಯದ ದಿವಗಂತ ಚಡ್ಡಿ ಬಾಲ ಅವರ ಹಿರಿಯ ಪುತ್ರರಾಗಿದ್ದಾರೆ. ಸದ್ಯ ಕಲ್ಲುಗುಂಡಿಯ ದಂಡೆಕಜೆಯಲ್ಲಿ ವಾಸವಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.