ನ್ಯೂಸ್ ನಾಟೌಟ್: ಆನೆ ದಾಳಿಯಲ್ಲಿ ಮೃತಪಟ್ಟ ಚೆಂಬು ಗ್ರಾಮದ ದಬ್ಬಡ್ಕದ ವೃದ್ದನ ಕುಟುಂಬಕ್ಕೆ ಸರ್ಕಾರದ ವತಿಯಿಂದ ಶಾಸಕ ಪೊನ್ನಣ್ಣ ಮಡಿಕೇರಿಯಲ್ಲಿ ಪರಿಹಾರ ಚೆಕ್ ವಿತರಿಸಿದರು.
ಚೆಂಬು ಗ್ರಾಮದಲ್ಲಿ ತಡರಾತ್ರಿ ಒಂಟಿ ಆನೆ ನಡೆಸಿದ ದಾಳಿಗೆ ಕೊಪ್ಪದ ಶಿವಪ್ಪ ಅನ್ನುವವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಂಪಾಜೆ ಆಸ್ಪತ್ರೆಗೆ ಕರೆ ತರಲಾಯಿತಾದರೂ ಅಷ್ಟರಲ್ಲಿ ಅವರು ಸಾವಿಗೀಡಾಗಿದ್ದರು.