ಕ್ರೈಂವೈರಲ್ ನ್ಯೂಸ್

ಮನೆ ಮುಂದೆ ಆಡುತ್ತಿದ್ದ ಏಳರ ಮಗುವಿನ ಮೇಲೆರಗಿದ ಚಿರತೆ..! ಚಿರತೆಯ ಜೊತೆ ಕಾದಾಡಿದ್ದೇಗೆ ತಂದೆ..? ಮುಂದೇನಾಯ್ತು..?

111

ನ್ಯೂಸ್ ನಾಟೌಟ್ : ಮನೆಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ಯಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ವರದಿಯಾಗಿದೆ.

ಏಳು ವರ್ಷದ ಲೇಖನ ಎಂಬ ಮಗು ಚಿರತೆ ದಾಳಿಗೆ ತುತ್ತಾಗಿತ್ತು. ರಾಕೇಶ್, ಹರ್ಷಿತಾ ದಂಪತಿಯ ಮಗು ಎಂದು ಗುರುತಿಸಲಾಗಿದ್ದು, ಮನೆ ಮುಂದೆ ಆಟವಾಡುತ್ತಿದ್ದಾಗ ಚಿರತೆ ಏಕಾಏಕಿ ದಾಳಿ ನಡೆಸಿದೆ. ಚಿರತೆ ದಾಳಿ ನಡೆಸುತ್ತಿದ್ದಂತೆ ಕಿರುಚಿಕೊಂಡ ಮಗುವನ್ನು ನೋಡಿ ಜೋರಾಗಿ ಕೂಗಿಕೊಂಡು ದೊಣ್ಣೆಯಿಂದ ಚಿರತೆಗೆ ಬೆದರಿಸಿದ ಆಕೆಯ ತಂದೆ ರಾಕೇಶ್ ಓಡಿಸಿದ್ದಾರೆ.

ತಂದೆಯ ಧೈರ್ಯ, ಸಮಯಪ್ರಜ್ಞೆಯಿಂದ ಮಗು ಚಿರತೆ ದಾಳಿಯಿದಾಗಿ ಪ್ರಾಣಾಪಾಯದಿಂದ ಪಾರಾಗಿದೆ. ಬಾಲಕಿಯ ಕಾಲನ್ನು ಪರಚಿರುವ ಚಿರತೆ ಮತ್ತೆ ಕಾಣಿಸಿಕೊಂಡಿಲ್ಲ. ತುಮಕೂರಿನ ಬೆಳ್ಳಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

See also  ಸರ್ಕಾರಿ ಬಸ್‌ನಲ್ಲಿ ಚಪ್ಪಲಿ, ಶೂಗಳಿಂದ ಬಡಿದಾಡಿಕೊಂಡದ್ದೇಕೆ ಯುವತಿಯರು..? ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget