Latestಜೀವನ ಶೈಲಿ/ಆರೋಗ್ಯರಾಜ್ಯ

ಹಲವು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪತ್ತೆ..! ಸತ್ತ ಕೋಳಿಗಳ ಮಾದರಿ ಸಂಗ್ರಹ..!

463
Spread the love

ನ್ಯೂಸ್‌ ನಾಟೌಟ್ :ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾದ ನಂತರ, ಆರೋಗ್ಯ ಇಲಾಖೆ ರಾಜ್ಯದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಿದೆ ಎಂದು ಅಧಿಕಾರಿಗಳು ಶುಕ್ರವಾರ(ಫೆ.28) ತಿಳಿಸಿದ್ದಾರೆ.

ರಾಯಚೂರಿನ ಮಾನ್ವಿ ತಾಲ್ಲೂಕು, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಬಳ್ಳಾರಿಯ ಸಂಡೂರು ತಾಲ್ಲೂಕಿನಲ್ಲಿ ಕೋಳಿಗಳಲ್ಲಿ ಹಕ್ಕಿ ಜ್ವರ (H5N1 ಏವಿಯನ್ ಇನ್ಫ್ಲುಯೆಂಜಾ) ಕಂಡುಬಂದಿದ್ದು, ಹಲವಾರು ಕೋಳಿಗಳು ಸಾವಿಗೀಡಾಗಿವೆ. ಆದರೆ, ರಾಜ್ಯದಲ್ಲಿ ಈವರೆಗೆ ಮನುಷ್ಯರಲ್ಲಿ ಹಕ್ಕಿಜ್ವರ ಪತ್ತೆಯಾಗಿರುವ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಹೇಳಿದರು.
ಪಶು ಸಂಗೋಪನಾ ಇಲಾಖೆ ಸತ್ತ ಕೋಳಿಗಳ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್‌ನ ಕೇಂದ್ರ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಹಕ್ಕಿ ಜ್ವರದಿಂದ ಪಕ್ಷಿಗಳು ಸಾವಿಗೀಡಾಗಿರುವುದಾಗಿ ದೃಢಪಟ್ಟಿದೆ. ಹಕ್ಕಿ ಜ್ವರ ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಪಶುಸಂಗೋಪನಾ ಇಲಾಖೆಯು ಹಕ್ಕಿ ಜ್ವರ ಪ್ರಕರಣಗಳು ಕಂಡುಬಂದ ಸ್ಥಳದ ಸುತ್ತಲಿನ 3 ಕಿ.ಮೀ ಪ್ರದೇಶದಲ್ಲಿನ ಕೋಳಿಗಳನ್ನು ಸಾಮೂಹಿಕವಾಗಿ ಕೊಲ್ಲಲು ನಿರ್ಧರಿಸಲಾಗಿದೆ.

‘ನಾವು ಕಣ್ಗಾವಲು ಹೆಚ್ಚಿಸಿದ್ದೇವೆ ಮತ್ತು ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾದ ಹತ್ತಿರದ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆಗಳ ಸೌಲಭ್ಯಗಳನ್ನು ಸ್ಥಾಪಿಸಿದ್ದೇವೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

See also  7ನೇ ತರಗತಿ ವಿದ್ಯಾರ್ಥಿನಿಗೆ ಮಾವನೊಂದಿಗೆ ಬಾಲ್ಯವಿವಾಹ ಮಾಡಿಸಿದ ಪಾಪಿಗಳು!! ಕಾಡಿದರೂ,ಬೇಡಿದರೂ ಮೃಗಗಳಂತೆ ವರ್ತಿಸಿ ಹೊತ್ತೊಯ್ದು ಮದ್ವೆ ಮಾಡಿಸಿದ್ರು!
  Ad Widget   Ad Widget   Ad Widget