Latestವಿಡಿಯೋವೈರಲ್ ನ್ಯೂಸ್ಸಿನಿಮಾ

‘ಛಾವಾ’ ಸಿನಿಮಾ ನೋಡಿ ರಾತ್ರಿ ನಿಧಿಗಾಗಿ ಕೋಟೆ ಅಗೆಯಲು ಬಂದ ನೂರಕ್ಕೂ ಹೆಚ್ಚು ಜನ..! ಛತ್ರಪತಿ ಶಿವಾಜಿ ಪುತ್ರನ ಕಥೆಯಲ್ಲಿ ನಿಧಿಯ ಉಲ್ಲೇಖ..!

505
Spread the love

ನ್ಯೂಸ್ ನಾಟೌಟ್ : ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟಿಸಿರುವ ‘ಛಾವಾ’ ಸಿನಿಮಾ ಬಾಕ್ಸ್ ಆಫೀಸ್ ​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಛಾವಾ’ ಸಿನಿಮಾ, ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಾಂಬಾಜಿ ಮಹರಾಜ್ ಕುರಿತಾದದ್ದಾಗಿದ್ದು, ಸಿನಿಮಾ ಬಿಡುಗಡೆ ಬಳಿಕ ಸಾಂಬಾಜಿಯ ಇತಿಹಾಸವನ್ನು ಪಠ್ಯಕ್ಕೆ ಸೇರಿಸುವಂತೆ ಬೇಡಿಕೆ ಎದ್ದಿದೆ. ಕೆಲವೆಡೆ ಸಂಬಾಜಿಯ ಮೂರ್ತಿಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಇದೆಲ್ಲದರ ನಡುವೆ ‘ಛಾವಾ’ ಸಿನಿಮಾ ನೋಡಿ ಕೆಲ ಜನ ಕೋಟೆಗಳನ್ನು ಕೊರೆದು ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ.

‘ಛಾವಾ’ ಸಿನಿಮಾನಲ್ಲಿ ಬರುವ ಕತೆ, ದೃಶ್ಯಗಳನ್ನು ನಂಬಿಕೊಂಡು ಮಧ್ಯ ಪ್ರದೇಶ ರಾಜ್ಯದ ಅಸಿರ್ ​ಘಡ ಕೋಟೆ ಬಳಿಯ ಹಳ್ಳಿಗರು ಅಸಿರ್ ​ಘಡ ಕೋಟೆಗೆ ಮುತ್ತಿಗೆ ಹಾಕಿ, ಕೋಟೆಯ ಸುತ್ತಲೂ ಅಗಿದು ಮೊಘಲರು ಬಚ್ಚಿಟ್ಟಿದ್ದ ಚಿನ್ನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ‘ಛಾವಾ’ ಸಿನಿಮಾನಲ್ಲಿ ಮೊಘಲರು ಲೂಟಿ ಹೊಡೆದ ಚಿನ್ನದ ಬಗ್ಗೆ ಉಲ್ಲೇಖ ಇದೆಯೆನ್ನಲಾಗುತ್ತಿದೆ. ಅಲ್ಲದೆ ಅಸಿರ್ ​ಘಡ ಕೋಟೆಗೂ, ಮೊಘಲರ ಇತಿಹಾಸಕ್ಕೂ ಗಾಢ ಸಬಂಧ ಇರುವ ಕಾರಣ, ಸ್ಥಳೀಯ ಹಳ್ಳಿಗರು ಚಿನ್ನಕ್ಕಾಗಿ ಅಸಿರ್ ​ಘಡ ಕೋಟೆಗೆ ಮುತ್ತಿಗೆ ಹಾಕಿದ್ದರು. ‘ಛಾವಾ’ ಸಿನಿಮಾದ ಕತೆ ಮಾತ್ರವೇ ಅಲ್ಲದೆ, ಸ್ಥಳೀಯ ಜನಪದ ಕತೆಗಳಲ್ಲಿಯೂ ಸಹ ಮೊಘಲರ ಚಿನ್ನದ ಬಗ್ಗೆ ಆ ಕೋಟೆಯಲ್ಲಿರುವ ಬಗ್ಗೆ ಉಲ್ಲೇಖಗಳು ಇವೆ ಎನ್ನಲಾಗಿದೆ. ಹಾಗಾಗಿ ಜನ ಒಟ್ಟೊಟ್ಟಿಗೆ ತಂಡೋಪತಂಡವಾಗಿ ಕೋಟೆಗೆ ಮುತ್ತಿಗೆ ಹಾಕಿ ಚಿನ್ನದ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.

ಜನ, ಕೊಡಲಿ, ಗಡಾರ, ಸಲಿಕೆಗಳು, ಟಾರ್ಚ್ ಲೈಟು ಇನ್ನಿತರೆಗಳನ್ನು ಹಿಡಿದುಕೊಂಡು ದೊಡ್ಡ ಸಂಖ್ಯೆಯಲ್ಲಿ ನೂರಕ್ಕೂ ಹೆಚ್ಚು ಜನ ಕೋಟೆಯ ಸುತ್ತ ಅಗೆಯಲು ಆರಂಭಿಸಿದ್ದರು. ರಾತ್ರಿ ಏಳರಿಂದ ಮಧ್ಯ ರಾತ್ರಿ 3 ಗಂಟೆ ವರೆಗೆ ಜನ ಚಿನ್ನಕ್ಕಾಗಿ ಕೋಟೆಯ ಸುತ್ತ ಹಳ್ಳಗಳನ್ನು ಅಗೆದಿದ್ದರು. ಆದರೆ ಜನ ನಿಧಿಗಾಗಿ ನೆಲ ಅಗೆಯುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ನಿಧಿ ಅಗೆಯಲು ಬಂದಿದ್ದ ಜನ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.  

See also  ದರ್ಶನ್ ಪ್ರಕರಣ: ಇಂದಿಗೆ(ಜು.18) ನ್ಯಾಯಾಂಗ ಬಂಧನ ಅವಧಿ ಮುಕ್ತಾಯ..! ಹೈಕೋರ್ಟ್‌ನಲ್ಲಿ ದಾಸನ ಅರ್ಜಿ ವಿಚಾರಣೆ..!
  Ad Widget   Ad Widget   Ad Widget   Ad Widget