ನ್ಯೂಸ್ ನಾಟೌಟ್: ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ(ಮಾ.29) ಮುಂಜಾನೆ ನಡೆದ ಎನ್ ಕೌಂಟರ್‌ನಲ್ಲಿ 16 ನಕ್ಸಲರು ಮೃತಪಟ್ಟಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕ್ಸಲರ ವಿರುದ್ಧ ಜಂಟಿ ಕಾರ್ಯಾಚರಣೆಗೆ ಭದ್ರತಾ ಸಿಬ್ಬಂದಿ ಹೊರಟಿದ್ದ ಸಂದರ್ಭದಲ್ಲಿ ಸುಕ್ಮಾ ಜಿಲ್ಲೆಯ ಕೆರ್ಲಾಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದೊಳಗೆ ಬೆಳಗಿನ ಹೊತ್ತು ಗುಂಡಿನ ಚಕಮಕಿ ನಡೆದಿದೆ.
ಕೆರ್ಲಾಪಾಲ್ ಪ್ರದೇಶದಲ್ಲಿ ನಕ್ಸಲರ ಇರುವಿಕೆ ಬಗ್ಗೆ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ ನಿನ್ನೆ ರಾತ್ರಿ(ಮಾ.28) ಕಾರ್ಯಾಚರಣೆ ಆರಂಭಿಸಿದ್ದರು. ಜಿಲ್ಲಾ ಮೀಸಲು ಪಡೆ (DRG) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಎನ್ ಕೌಂಟರ್ ನಲ್ಲಿ ಭಾಗಿಯಾಗಿದ್ದರು.
ಎನ್ ಕೌಂಟರ್ ಸ್ಥಳದಿಂದ ಇದುವರೆಗೆ 16 ನಕ್ಸಲರ ಶವಗಳನ್ನು ಹೊರತೆಗೆಯಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: ಬಿಸಿಲ ಶಾಖದಿಂದ ಪಾರಾಗಲು ಐಷಾರಾಮಿ ಕಾರಿಗೆ ಸಗಣಿ ಲೇಪಿಸಿದ ವೈದ್ಯ..! ವಿಡಿಯೋ ವೈರಲ್
ಇಂದು(ಮಾ.29) ಈ ವರ್ಷದ ಮೊದಲ ಸೂರ್ಯ ಗ್ರಹಣ, ಯುಗಾದಿಗೂ ಮೊದಲು ಬಂದ ಸೂರ್ಯ ಗ್ರಹಣದಿಂದ ಧಾರ್ಮಿಕ ಮಹತ್ವ..!
ಮಯನ್ಮಾರ್ ಭೂಕಂಪದಲ್ಲಿ ಸಾವಿನ ಸಂಖ್ಯೆ 694ಕ್ಕೆ ಏರಿಕೆ..! 15 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ ಭಾರತ