ಕ್ರೈಂವೈರಲ್ ನ್ಯೂಸ್

ಛತ್ರಪತಿ ಶಿವಾಜಿ ಪುತ್ಥಳಿ ದಿಢೀರ್ ತೆರವುವಿಗೆ ಕಾರಣವೇನು? ಸಂಘಪರಿವಾರ ಕಾರ್ಯಕರ್ತರ ಪ್ರತಿಭಟನೆ! 2 ದಿನ ನಿಷೇಧಾಜ್ಞೆ ಜಾರಿ! ಏನಿದು ಗಲಾಟೆ!

289

ನ್ಯೂಸ್ ನಾಟೌಟ್: ಲಯನ್ಸ್ ಸರ್ಕಲ್ ಬಳಿ ಏಕಾಏಕಿ ಸ್ಥಾಪಿಸಲಾಗಿರುವ ಶಿವಾಜಿ ಮೂರ್ತಿ ತೆರವುಗೊಳಿಸಿದ್ದಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ಸೇರಿ ಕೆಲವು ಸಂಘಪರಿವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಏಕಾಏಕಿ ರೊಚ್ಚಿಗೆದ್ದ ಕಾರ್ಯಕರ್ತರು ಸಾಕಷ್ಟು ಗಲಾಟೆ ಮಾಡಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿಯಾಗಿದ್ದು, ಶಿವಾಜಿ ಮೂರ್ತಿ ತೆರವುಗೊಳಿಸದಂತೆ ಒತ್ತಾಯಿಸಿ ಬಾಗಲಕೋಟೆ ನಗರದ ಲಯನ್ಸ್ ಸರ್ಕಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಪಕ್ಷದ ಮುಖಂಡರು ಸೇರಿದಂತೆ ಇತರ ಕೆಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಇದ್ದು, ಜಿಲ್ಲಾಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಸ್ಥಳ ದಲ್ಲಿ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ ನೇತೃತ್ವದಲ್ಲಿ ಬೀಗಿ ಬಂದೂಬಸ್ತ್‌ ಏರ್ಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

See also  ಇಸ್ರೇಲ್‌ನಲ್ಲಿ ಸಿಲುಕಿದ 5000ಕ್ಕೂ ಅಧಿಕ ಕರಾವಳಿಗರ ರಕ್ಷಣೆ ಹೇಗೆ? ನಳಿನ್ ಕುಮಾರ್ ಕಟೀಲ್ ವಿದೇಶಾಂಗ ಸಚಿವರಿಗೆ ಬರೆದ ಪತ್ರದಲ್ಲೇನಿದೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget