ಕ್ರೈಂ

ಅಪಘಾತಕ್ಕೀಡಾಗಿದ್ದ ವಾಹನ ಸವಾರರ ಬೆದರಿಸಿ ದೋಚಿದ ದುಷ್ಕರ್ಮಿಗಳು..!

ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್ ನಲ್ಲಿ ಅಪಘಾತಕ್ಕೆ ತುತ್ತಾಗಿದ್ದ ವಾಹನದಲ್ಲಿದ್ದ ಸವಾರರನ್ನು ಬೆದರಿಸಿ ಹಣ ಉಂಗುರ ಹಾಗೂ ಮೊಬೈಲನ್ನು ಕಸಿದು ಕೊಂಡು ಕಳ್ಳರು ಪರಾರಿಯಾಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಬೆಂಗಳೂರಿನ ದೇವನಹಳ್ಳಿಯ ಮಧುಸೂದನ್ ಎಂಬುವರು ಬಣಕಲ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಮೇ3ರಂದು ದೇವನಹಳ್ಳಿಯಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ಕಾರಿನಲ್ಲಿ ಹೊರಟಿದ್ದು ಚಾರ್ಮಾಡಿ ಘಾಟ್ ನಲ್ಲಿ 12.30 ರ ಸಮಯಕ್ಕೆ ರಸ್ತೆಬದಿಯ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಂಬುಲೆನ್ಸ್ ಗೆ ಕರೆ ಮಾಡಲು ನೆಟ್ವರ್ಕ್ ಇಲ್ಲದೆ ಇರುವುದರಿಂದ ಕಾರಿನಲ್ಲಿ ಕುಳಿತಿದ್ದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕಡೆಯಿಂದ ಮೂಡಿಗೆರೆ ಕಡೆಗೆ ಬೈಕ್ ಮತ್ತು ಸ್ಕೂಟರ್ ನಲ್ಲಿ ಬಂದ ಮೂವರು ಯುವಕರ ತಂಡ ಕಾರನ್ನು ಸುತ್ತುವರಿದು ಮೊಬೈಲ್, ಪರ್ಸ್, ಹಾಗೂ ಉಂಗುರವನ್ನು ಕಸಿದುಕೊಂಡು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related posts

ಜೈಲಿನಿಂದ ಮುರುಘಾಶ್ರೀ ಬಿಡುಗಡೆಗೆ ​ಆದೇಶ..! 12 ಸಾಕ್ಷಿಗಳ ವಿಚಾರಣೆ ಮುಕ್ತಾಯ..!

ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕದ್ದು ಪರಾರಿ

ಮಂಗಗಳನ್ನು ಕೊಂದು ಬೇಯಿಸಿ ತಿಂದರಾ ಭಿಕ್ಷುಕರು..? ಅವರೊಳಗೆ ಆದ ಜಗಳದಿಂದ ಬಯಲಾಯ್ತ ರಹಸ್ಯ..? ಏನಿದು ವಿಚಿತ್ರ ಘಟನೆ..?