ಕರಾವಳಿಸುಳ್ಯ

ಸುಬ್ರಹ್ಮಣ್ಯ : ದೇವರಗದ್ದೆ ಕೊರಗಜ್ಜನ ಗುಡಿಗೆ ರ‍್ಯಾಪರ್  ಚಂದನ್ ಶೆಟ್ಟಿ,ನಿರಂಜನ್ ದಂಪತಿ ಭೇಟಿ,ಆಲ್ಬಂ ಸಾಂಗ್,ಚಲನ ಚಿತ್ರ ಯಶಸ್ವಿಯಾಗಲೆಂದು ಪ್ರಾರ್ಥನೆ

ನ್ಯೂಸ್ ನಾಟೌಟ್ : ಸುಬ್ರಹ್ಮಣ್ಯ ಸಮೀಪದ ದೇವರಗದ್ದೆ ಶ್ರೀ ಆದಿಮೊಗೇರ್ಕಳ ಮತ್ತು ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನಕ್ಕೆ ಶುಕ್ರವಾರದಂದು ಖ್ಯಾತ ರ‍್ಯಾಪರ್  ಚಂದನ್ ಶೆಟ್ಟಿ ಮತ್ತು ಗಿಚ್ಚಿ ಗಿಲಿ ಗಿಲಿ ನಿರೂಪಕ ನಿರಂಜನ್ ದೇಶಪಾಂಡೆ , ಅವರ ಪತ್ನಿ ಶಸ್ವಿನಿ ದೇಶಪಾಂಡೆ ಭೇಟಿ ನೀಡಿ ಅಜ್ಜನ ದರ್ಶನ ಪಡೆದರು.ಈ ವೇಳೆ ಚಂದನ್ ಶೆಟ್ಟಿ ಅವರು ತಾನು ಹಾಡಿರುವ ಆಲ್ಬಂ ಸಾಂಗ್ ಹಾಗೂ ನಟಿಸಿರುವ ಚಲನಚಿತ್ರ ಬಿಡುಗೆಯಾಗಿ ಯಶಸ್ವಿಯಾಗಬೇಕೆಂದು ಬೇಡಿಕೊಂಡರು.

ಸನ್ನಿಧಾನಕ್ಕೆ ಭೇಟಿ ನೀಡಿದ ವೇಳೆ ಚಂದನ್ ತಾನು ಖ್ಯಾತ ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಆಲ್ಬಂ ಸಾಂಗ್ ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಿ ಮೂಡಿ ಬರಬೇಕು ಎಂದು ಕೊರಗಜ್ಜನ ಬಳಿ ಪ್ರಾರ್ಥಿಸಿಕೊಂಡರು.ಈ ವೇಳೆ ಕೊರಗಜ್ಜನಲ್ಲಿ ಮದ್ಯಸ್ಥ ಬಾಬು ಎಂ ಮೊಗ್ರರ ಮೂಲಕ ಪ್ರಾರ್ಥಿಸಿದರು. ಅಲ್ಲದೇ ಪ್ರಪ್ರಥಮವಾಗಿ ತಾನು ನಾಯಕ ನಟನಾಗಿ ಅಭಿನಯಿಸಿದ ಚಲನಚಿತ್ರವು ಬಿಡುಗಡೆಗೆ ಸಿದ್ದವಾಗಿದ್ದು, ಯಶಸ್ವಿ ಯಾಗಬೇಕು ಎಂದು ಪ್ರಾರ್ಥನೆ ಮಾಡಿದರು.

Related posts

ಸುಳ್ಯ: ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನ ಧನ್ವಂತರಿ ಹಾಲ್‌ನಲ್ಲಿ ಯೋಗ ತರಬೇತಿ ಕಾರ್ಯಕ್ರಮ;ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದ ಮೊದಲನೇ ದಿನದ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರು

Madikeri love story: ಮಡಿಕೇರಿ:ಪ್ರಿಯಕರನನ್ನು ಮನೆಗೆ ಕರೆಸಿ ಬಿಸಿ ನೀರು ಎರಚಿದ ಯುವತಿ ಮನೆಯವರು..! ಸಾಧಿಕ್ ಸ್ಥಿತಿ ಗಂಭೀರ..!

ಬೆಳ್ಳಾರೆ : ಡಾ.ಕೆ ಶಿವರಾಮ ಕಾರಂತ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ದಾಖಲಾತಿ ಆರಂಭ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದಿಂದ ವಿಷೇಶ ವೇತನ!