Latestಕ್ರೀಡೆ/ಸಿನಿಮಾಸಿನಿಮಾ

ʻಹೊಸ ಜೀವನ ಶುರು ಮಾಡಲಿದ್ದೇನೆʼ ಎಂದ ಚಂದನ್ ಶೆಟ್ಟಿ!!;ಏನಿದು ಸರ್‌ಪ್ರೈಸಿಂಗ್ ಹೇಳಿಕೆ?

1.5k

ನ್ಯೂಸ್ ನಾಟೌಟ್: ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಜತೆಗಿನ ಡಿವೋರ್ಸ್‌ ಬಳಿಕ ಇದೀಗ ಚಂದನ್ ಶೆಟ್ಟಿ ಸರ್‌ಪ್ರೈಸಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನದ ಬಳಿಕ ಇದೀಗ ಸೂತ್ರಧಾರಿ ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾ ಮೂಲಕ ಚಂದನ್ ಶೆಟ್ಟಿ ಸ್ಯಾಂಡಲ್ ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. 

ಹೌದು,ಸೂತ್ರಧಾರಿ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದನ್ ಶೆಟ್ಟಿ, ನಾನು ನಟನಾಗಬೇಕು ಎನ್ನುವುದು ನಮ್ಮ ತಂದೆಯ ಕನಸು. ಚಿಕ್ಕಂದಿನಿಂದಲೂ ಸಿನಿಮಾ ಹೀರೋ ಆಗಬೇಕು ಅಂತಿದ್ರು ಎಂದಿದ್ದಾರೆ.ಆದರೆ ನಾನು ಕನ್ನಡಿ ಮುಂದೆ ನಿಂತು ನೋಡ್ಕೊಳ್ತಿದ್ದೆ. ನಾನು ಯಾವಾಗ ಹೀರೋ ಆಗ್ತೀನಿ ಅಂತ ನಗು ಬರತಿತ್ತು. ಆದರೆ ನನ್ನ ತಂದೆಯ ಕನಸು ಈಡೇರುತ್ತಿದೆ. ಇದೇ ಮೇ 9ರಂದು ನಿಜ ಆಗುತ್ತಿದೆ ಎಂದು ಚಂದನ್ ಹೇಳಿದ್ದಾರೆ. 

ಅಂದ ಹಾಗೆ ಸೂತ್ರಧಾರಿ ಸಿನಿಮಾದಲ್ಲಿ ನಾನು ಅಂಡರ್‌ಕವರ್‌ ಪೊಲೀಸ್‌ ಪಾತ್ರ ಮಾಡಿದ್ದೀನಿ. ಈ ಸಿನಿಮಾ ಮೂಲಕ ನಾನು ಹೊಸ ಜೀವನ ಶುರು ಮಾಡಲಿದ್ದೇನೆ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.ಈ ಸಿನಿಮಾ ಒಪ್ಪಿಕೊಳ್ಳಲು ನಿರ್ಮಾಪಕ ನವರಸನ್ ಅವರೇ ಕಾರಣ. ದಯವಿಟ್ಟು ಎಲ್ಲರೂ ಈ ಸಿನಿಮಾಗೆ ಸಪೋರ್ಟ್ ಮಾಡಿ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ. 

See also  ಕಿಚ್ಚ ಸುದೀಪ್ ಸಹಾಯ ಬೆನ್ನಲ್ಲೇ 'ಚಿರಂಜೀವಿ'ಗೆ ಹೆಲ್ಪ್ ಮಾಡಿದ ನಟ ಧ್ರುವ ಸರ್ಜಾ!!ಕಣ್ಣಿನಲ್ಲಿ ಪೊರೆ ಬೆಳೆದ ಮಗುವಿನ ಶಸ್ತ್ರಚಿಕಿತ್ಸೆಗೆ ಸಹಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget