ರಾಜ್ಯವೈರಲ್ ನ್ಯೂಸ್ಸಿನಿಮಾ

ನಿವೇದಿತಾ ಗೌಡ ಮತ್ತು ಚಂದನ್‌ ಶೆಟ್ಟಿಯ ಜಂಟಿ ಸುದ್ದಿಗೋಷ್ಠಿ..! ಹೊಂದಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆವು, ಸಾಧ್ಯವಾಗಲಿಲ್ಲ ಎಂದದ್ದೇಕೆ ಚಂದನ್..? ಇಲ್ಲಿದೆ ಸಂಪೂರ್ಣ ಮಾಹಿತಿ

256

ನ್ಯೂಸ್‌ ನಾಟೌಟ್‌: ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಬಗೆಯ ಟೀಕೆ, ವಿಶ್ಲೇಷಣೆಗಳು ನಡೆಯುತ್ತಿರುವಾಗ, ಇವುಗಳಿಗಳಿಂದ ನಮಗೆ ಮಾನಸಿಕ ನೆಮ್ಮದಿ ಹಾಳಾಗಿದೆ ಎಂದಿದ್ದಾರೆ, ಹೀಗಾಗಿ ವದಂತಿಗಳಿಗೆಲ್ಲ ತೆರೆ ಎಳೆಯಲು ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಇವರಿಬ್ಬರೂ ಸೋಮವಾರ(ಜೂ.10) ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಚಂದನ್ ಶೆಟ್ಟಿ ಮಾತನಾಡಿದ್ದು, “ನಾವು ಕಾನೂನಿನ ಪ್ರಕಾರವಾಗಿ ವಿಚ್ಛೇದನ ಪಡೆದಿದ್ದೇವೆ. ಈಗಾಗಲೇ ಇನ್‌ ಸ್ಟಾಗ್ರಾಂನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ. ಸುಮ್ಮನೆ ಇಲ್ಲದಿದ್ದನ್ನು ಸೃಷ್ಟಿ ಮಾಡಬೇಡಿ. ನಮ್ಮ ಖಾಸಗಿ ವಿಚಾರವನ್ನು ನಮ್ಮಲ್ಲೇ ಇರಲು ಬಿಡಿ,” ಎಂದು ವಿನಂತಿಸಿಕೊಂಡಿದ್ದಾರೆ. “ನನ್ನ ಮತ್ತು ನಿವೇದಿತಾ ಆಲೋಚನೆಗಳು ಬೇರೆ ಆಗಿವೆ. ಹೊಂದಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆವು. ಇದು ಸಾಧ್ಯವಾಗದಿದ್ದಕ್ಕೇ ವಿಚ್ಛೇದನಕ್ಕೆ ಮುಂದಾಗಿದ್ದು. ಇದಕ್ಕೇ ಬೇರೆ ಅರ್ಥ ಕಲ್ಪಿಸಬೇಡಿ, ಬೇರೆ ಯಾರ ಜೊತೆಗೋ ಸಂಬಂಧವನ್ನೂ ಕಲ್ಪಿಸಬೇಡಿ, ಇದರಿಂದ ನಾವು ತುಂಬಾ ನೊಂದಿದ್ದೇವೆ” ಎಂದು ಸುದ್ದಿಗೋಷ್ಠಿಯಲ್ಲಿ ಚಂದನ್‌ ಶೆಟ್ಟಿ ಹೇಳಿದ್ದಾರೆ.

“ನಿವೇದಿತಾಗೆ ಮೂರನೇ ವ್ಯಕ್ತಿಯ ಹೆಸರನ್ನ ಸೇರಿಸಬೇಡಿ. ಈ ಬಗ್ಗೆ ಸಂಬಂಧ ಕಲ್ಪಿಸಿರುವು ತುಂಬ ಬೇಸರ ಆಗಿದೆ. ಇನ್ನು ನಿವೇದಿತಾ ಗೌಡ ನನ್ನಿಂದ ಯಾವುದೇ ಜೀವನಾಂಶ ಕೇಳಿಲ್ಲ, ನಾನು ಕೊಟ್ಟಿಲ್ಲ. ಮಗು ಪಡೆಯುವ ವಿಚಾರದಲ್ಲಿ ನಾನು ನಿವೇದಿತಾಗೆ ಒತ್ತಾಯ ಮಾಡಿದ್ದೇನೆ ಎನ್ನುವ ವದಂತಿಗಳು ಕೂಡ ಹರಿದಾಡುತ್ತಿದ್ದು, ಅವುಗಳು ಸಹ ನಿಜ ಅಲ್ಲ. ನಾನು ಒತ್ತಾಯ ಮಾಡಿಲ್ಲ. ಮಕ್ಕಳ ವಿಚಾರದಲ್ಲಿ ನಿವೇದಿತಾ ಕೂಡ ನಿರಾಕರಿಸಿಲ್ಲ” ಎಂದು ಚಂದನ್​ ಶೆಟ್ಟಿ ಹೇಳಿದ್ದಾರೆ.

“ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳನ್ನು ನೋಡಿದಾಗ ನನಗೆ ತುಂಬಾ ನೋವಾಯಿತು. ನಿಮಗೆ ಇಷ್ಟ ಬಂದ ರೀತಿಯಲ್ಲಿ ಪೋಸ್ಟ್​ ಮಾಡಿ ಇನ್ನೊಬ್ಬರ ಜೀವನದಲ್ಲಿ ಆಟಬೇಡಿ,” ಎಂದು ನಿವೇದಿತಾ ಗೌಡ ಬೇಸರ ತೋಡಿಕೊಂಡರು.

Click 👇

https://newsnotout.com/2024/06/bus-pm-oath-kannada-news-jammu-and-kashmir
https://newsnotout.com/2024/06/yuvarajkumar-divorce-case-in-rajkumar-family
https://newsnotout.com/2024/06/rama-dasharata-bhghavan-kannada-news
https://newsnotout.com/2024/06/swamiji-nomore-issue-police-arrest-kannada-news

See also  ಮಹಿಳೆ ಬಳಿ ಕುರಿಗಳನ್ನು ಖರೀದಿಸಿ ನಕಲಿ ನೋಟು ನೀಡಿ ಆರೋಪಿಗಳು ಪರಾರಿ..! ಮಹಿಳೆಯ ವಿರುದ್ಧವೇ ದೂರು ನೀಡಿದ ಬ್ಯಾಂಕ್ ನಿರ್ದೇಶಕರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget