ನ್ಯೂಸ್ ನಾಟೌಟ್: ಕರೋನಾ ೩ನೇ ಅಲೆಯ ಮುನ್ನೆಚ್ಚರಿಯಾಗಿ ಕ್ಷೇತ್ರದ ೧೫ ವರ್ಷದ ಕೆಳಗಿನ ಸುಮಾರು ೪೦ ಸಾವಿರ ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ವಾತ್ಸಲ್ಯ ಎಂಬ ಹೆಸರಿನಲ್ಲಿ ನಡೆದ ಈ ಕಾರ್ಯಕ್ರಮವನ್ನು ಕರ್ನಾಟಕ ಸರಕಾರವೂ ಅಳವಡಿಸಿಕೊಂಡಿದೆ. ಇದು ರಾಜ್ಯವ್ಯಾಪ್ತಿ ಜಾರಿಯಾಗಿರುವುದು ವಿಶೇಷ.
ಈ ಕಾರ್ಯಕ್ರಮದಡಿ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆರೋಗ್ಯ ಕಿಟ್ ವಿತರಣೆ, ಅಪೌಷ್ಟಿಕತೆ ಮಕ್ಕಳಿಗೆ ವಿಶೇಷ ಗಮನ, ತೀವ್ರ ಸಮಸ್ಯೆ ಕಂಡು ಬಂದ ಮಕ್ಕಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಗಳ ವಿತರಣೆ, ಉಚಿತೆ ಚಿಕಿತ್ಸೆಗೆ ಕ್ರಮ, ಶಾಸಕರ ನಿಧಿಯಿಂದ ವಿಶೇಷ ಚೇತನ ಮಕ್ಕಳಿಗೆ ಉಪಯೋಗವಾಗುವ ಪರಿಕರಗಳ ವೆಚ್ಚ ಭರಿಸುವಿಕೆಯನ್ನು ಮಾಡಲಾಗಿದೆ.