ಕರಾವಳಿ

ಆರಿಕೋಡಿ: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಜನಜಾತ್ರೆ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲಿನ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ನವರಾತ್ರಿ ಪೂಜೆಯ ಹಿನ್ನೆಲೆಯಲ್ಲಿ ಮಂಗಳವಾರ ಭಕ್ತಜನಸಾಗರ ನೆರೆದು ದೇವಿಯ ದರ್ಶನ ಪಡೆದುಕೊಂಡರು.

ನಾಗತಂಬಿಲ, ಮಹಾಪೂಜೆ ಮತ್ತು ಆಯುಧ ಪೂಜೆ ಕಾರ್ಯಕ್ರಮ ನೆರವೇರಿತು. ಇದೇ ವೇಳೆ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಪೆನ್‌ ಮತ್ತು ಬಳಪ ವಿತರಣೆ ಮಾಡಲಾಯಿತು. ಮಹಿಳೆಯರಿಗೆ ರವಿಕೆ ಕಣ ಮತ್ತು ಬಳೆ ವಿತರಣೆ, ವಾಹನ ಪೂಜೆ ನೆರವೇರಿತು. ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿ ದೇವಸ್ಥಾನಕ್ಕೆ ಬಂದಿದ್ದು ವಿಶೇಷವಾಗಿತ್ತು. ಇದೇ ವೇಳೆ ಅನ್ನಸಂತರ್ಪಣೆ ಕೂಡ ನಡೆಯಿತು.

Related posts

ಹಲವಾರು ಮಂದಿಯ ಜೀವ ರಕ್ಷಿಸಿ ಪ್ರಾಣ ಬಿಟ್ಟ ಬಸ್ ಚಾಲಕ, ಹೃದಯಾಘಾತದಿಂದ ಸಾಯುವ ಮೊದಲು ಆತ ಮಾಡಿದ್ದೇನು..?

‘ಹರೀಶ್ ಪೂಂಜಾನ ಚೇಲಾ ಶಶಿರಾಜ್ ಶೆಟ್ಟಿ ಜತೆ ಬಾರಿ ತಿರುಗಾಡುತ್ತೀಯಾ’ಮೆಸ್ಕಾಂ ಉದ್ಯೋಗಿಯಿಂದ ಪಿಕಪ್ ವಾಹನ ತಡೆದು ಜೀವ ಬೆದರಿಕೆ, ದೂರು ದಾಖಲು

ಸುಳ್ಯ: ಮತ್ತೊಂದು ಕಳವು ಪ್ರಕರಣ;ಚಾಕಲೇಟ್‌,ಸಿಗರೇಟ್‌ ಸೇರಿದಂತೆ ಕಾಣಿಕೆ ಹುಂಡಿಯಲ್ಲಿದ್ದ ನಗದನ್ನು ಬಿಡದ ಕಳ್ಳರು..!