ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಮುನಿಸಿನ ಬಗ್ಗೆ ಧ್ರುವ ಸರ್ಜಾ ಹೇಳಿದ್ದೇನು? ದರ್ಶನ್ ಬಳಿ ಕೇಳಲು ಮೂರು ಪ್ರಶ್ನೆಗಳಿವೆ ಎಂದದ್ದೇಕೆ ಧ್ರುವ ಸರ್ಜಾ?

ನ್ಯೂಸ್ ನಾಟೌಟ್: ಕಳೆದ ಮೂರು ವರ್ಷಗಳಿಂದ ನಟ ಧ್ರುವ ಸರ್ಜಾ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿರಲಿಲ್ಲ. ಆದರೆ, 35ನೇ ವರ್ಷಕ್ಕೆ ಕಾಲಿಟ್ಟಿರೋ ನಟ ನಿನ್ನೆ ರಾತ್ರಿ ಕೆ.ಆರ್ ರಸ್ತೆಯಲ್ಲಿರೋ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡರು.

ಕಾವೇರಿ ಹೋರಾಟ – ಕರ್ನಾಟಕ ಬಂದ್ ದಿನದಂದು ಚಾಲೆಂಜಿಂಗ್​​ ಸ್ಟಾರ್ ದರ್ಶನ್ ಜೊತೆ ಮಾತನಾಡದ ವಿಚಾರಕ್ಕೆ‌ ಪ್ರತಿಕ್ರಿಯಿಸಿದ ನಟ ಧ್ರುವ ಸರ್ಜಾ, ದರ್ಶನ್ ಜೊತೆಗಿನ ಮನಸ್ತಾಪ ಒಪ್ಪಿಕೊಂಡರು.

ಮನಸ್ಸಿನ ಒಳಗೊಂದು, ಹೊರಗೊಂದು ಇರಲು ಆಗಲ್ಲ. ದರ್ಶನ್ ಅವರಲ್ಲಿ ಕೇಳಲು ನನ್ನ ಬಳಿ ಮೂರು ಪ್ರಶ್ನೆಗಳಿವೆ. ಆ ಪ್ರಶ್ನೆಗಳನ್ನು ವೈಯಕ್ತಿಕವಾಗಿ ನಾನು ದರ್ಶನ್ ಅವರ ಬಳಿ ಕೇಳಿ ಸ್ಪಷ್ಟನೆ ತೆಗೆದುಕೊಳ್ಳುತ್ತೇನೆ.

ಮನಸ್ತಾಪ ಏನೇ ಇರಲಿ, ದರ್ಶನ್ ಅವರು ನಮ್ಮ ಸೀನಿಯರ್. ಅವರಿಗೆ ನಾವು ಗೌರವ ಕೊಟ್ಟೆ ಕೊಡುತ್ತೇವೆ. ನಮ್ಮ ಚಿತ್ರಕ್ಕೆ ಅವರು ಸಪೋರ್ಟ್ ಮಾಡಿದ್ದಾರೆ. ಆದರೆ ನನ್ನ ಹೆಸರಲ್ಲಿ ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಏನೇನೋ ಪೋಸ್ಟ್ ಹಾಕುತ್ತಿದ್ದಾರೆ. ಅವರಿಗೆ ನಾನು ಹೇಳುವುದು ಇಷ್ಟೇ, ಆ ರೀತಿಯ ಕೆಲಸ ಮಾಡಬೇಡಿ. ಒಂದು ವೇಳೆ ಮಾಡೇ ಮಾಡುತ್ತೇನೆ ಅಂದ್ರೆ ದಯವಿಟ್ಟು ತಗಲಾಕೋಬೇಡಿ ಎಂದು ಕೆಲ ಕಿಡಿಗೇಡಿಗಳಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ ಎನ್ನಲಾಗಿದೆ.

ಇಂದು(ಅ.೬) ಅಣ್ಣ ಚಿರು ಅಭಿನಯದ ರಾಜಮಾರ್ತಾಂಡ ಸಿನಿಮಾ ಬಿಡುಗಡೆ ಆಗಿದೆ. ಈ ಹಿನ್ನೆಲೆಯಲ್ಲಿ ದೂರದೂರಿನಿಂದ ಬರುವ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ರಕ್ತದಾನ ಶಿಬಿರ ಆಯೋಜಿಸಲಾಗಿದೆ. ರೇಷನ್ ಕಿಟ್, ನೋಟ್ ಬುಕ್ ವಿತರಣೆ ಮಾಡಲಿದ್ದಾರೆ‌. ಜೊತೆಗೆ ಧ್ರುವ ಸರ್ಜಾ ಅಭಿಮಾನಿಗಳ ಜೊತೆ ರಾಜಮಾರ್ತಾಂಡ ಸಿನಿಮಾ ವೀಕ್ಷಿಸಲಿದ್ದಾರೆ.

Related posts

ಕಳ್ಳ ಸ್ವಾಮಿ ಮಾತು ಕೇಳಬೇಡಿ, ಎಸಿ ರೂಂ ಸ್ವಾಮೀಜಿ ನಮಗೆ ಬೇಕಾಗಿಲ್ಲ ಎಂದ್ದದ್ದೇಕೆ ಯತ್ನಾಳ್‌..? ಯಾರು ಆ ಸ್ವಾಮೀಜಿ..?

ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, ಇಂದಿನಿಂದ(ಎ.21) 2 ದಿನ ವ್ಯಾಪಕ ಮಳೆ ಸಾಧ್ಯತೆ

ಬುದ್ಧಿಮಾಂದ್ಯ ಮಗುವನ್ನು ಬಿಟ್ಟು ದಂಪತಿ ಭಾರತಕ್ಕೆ ಪರಾರಿ! ಪೋಷಕರೇ ಕೊಲೆ ಮಾಡಿದರಾ?