ಕ್ರೈಂವಿಡಿಯೋವೈರಲ್ ನ್ಯೂಸ್

500 ರೂಪಾಯಿ ಚಲನ್‌  ತಪ್ಪಿಸಲು ಪ್ರೀತಿಸಿದ ಹುಡುಗಿನ್ನೇ ನೆಲಕ್ಕುರುಳಿಸಿ ಹೋದ ಯುವಕ..! ಮುಂದೇನಾಯ್ತು..? ಇಲ್ಲಿದೆ ವಿಡಿಯೋ ವೈರಲ್!

215

ನ್ಯೂಸ್ ನಾಟೌಟ್: ಹೆದ್ದಾರಿಗಳಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಸಿಸಿಟಿವಿ ಆಧರಿಸಿ ಪೊಲೀಸ್ ಇ ಚಲನ್ ನೀಡುತ್ತಾರೆ. ಇನ್ನು ಕೆಲವು ಭಾಗದಲ್ಲಿ ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಖುದ್ದು ಪೊಲೀಸರು ಹಾಜರಿರುತ್ತಾರೆ. ಪೊಲೀಸರ ಮುಂದೆ ಸ್ಟಂಟ್ ಮಾಡುತ್ತಾ, ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಹಿಡಿಯುವುದು ನಿಯಮ, ಈ ವೇಳೆ ಹಲವರು ಸುಳ್ಳು ಹೇಳಿಯೋ ಅಥವಾ ಬೇರೆ ರೀತಿಗಳಿಂದ ತಪ್ಪಿಸಲು ಪ್ರಯತ್ನಿಸುತ್ತಾರೆ.

ಹೀಗೆ ಹಲವು ನಿಯಮ ಉಲ್ಲಂಘಿಸಿ ಸಿಗ್ನಲ್ ಬಳಿ ನಿಂತ ಬೈಕರನ್ನು ಟ್ರಾಫಿಕ್ ಪೊಲೀಸ್ ರೆಡ್ ಹ್ಯಾಂಡ್ ಆಗಿ ಹಿಡಿಯಲು ತೆರಳಿದ್ದಾರೆ. ಪೊಲೀಸ್‌ನ ನೋಡಿ ಬೈಕ್ ಎಕ್ಸಲೇಟರ್ ಒಂದೇ ಸಮನ ರೈಸ್ ಮಾಡಿ ಬೈಕ್ ಮುನ್ನುಗ್ಗಿಸಿದ್ದಾನೆ. ಆದರೆ ಈತನ ರಭಸಕ್ಕೆ ಹಿಂಭಾಗದಲ್ಲಿ ಏನೂ ಅರಿಯದ ಕುಳಿತಿದ್ದ ಈತನ ಗೆಳತಿ ನೆಲಕ್ಕುಳಿದ್ದಾಳೆ. ಗರ್ಲ್‌ಫ್ರೆಂಡ್ ಕೆಳಕ್ಕೆ ಬಿದ್ದರೂ ಬೈಕ್ ಮಾತ್ರ ನಿಲ್ಲಿಸದೇ ವೇಗವಾಗಿ ಪೊಲೀಸರಿಂದ ತಪ್ಪಿಸಿ ಮುಂದೆ ಸಾಗಿದ ಘಟನೆಯ ವಿಡಿಯೋ ವೈರಲ್ ಆಗಿದೆ.

ವಾಹನಗಳ ಓಡಾಟ, ಜನರ ಓಡಾಟ ಸೇರಿದಂತೆ ಕಿಕ್ಕಿರಿದು ತುಂಬಿದ ರಸ್ತೆ. ಸಿಗ್ನಲ್ ಬಳಿ ವಾಹನಗಳು ನಿಂತಿದೆ. ಇದೇ ರಸ್ತೆಯಲ್ಲಿ ತನ್ನ ಗರ್ಲ್‌ಫ್ರೆಂಡ್ ಕೂರಿಸಿಕೊಂಡು ಬೈಕರ್ ಒಬ್ಬ ಬಂದಿದ್ದಾನೆ. ಈತನ ಬಳಿ ಹೆಲ್ಮೆಟ್ ಇಲ್ಲ, ಹಿಂಭಾಗದಲ್ಲಿ ಕುಳಿತ ಗರ್ಲ್‌ಫ್ರೆಂಡ್‌ಗೂ ಹೆಲ್ಮೆಟ್ ಇಲ್ಲ. ಇನ್ನು ಈತನ ವಾಹನಕ್ಕೆ ಸರಿಯಾಗಿ ನಂಬರ್ ಪ್ಲೇಟ್ ಕೂಡ ಇಲ್ಲ. ಹೀಗಾಗಿ ಆರ್‌ಸಿಬಿ, ವಿಮೆ, ಎಮಿಶನ್ ದಾಖಲೆಗಳು ಇರುವ ಸಾಧ್ಯತೆಗಳು ತೀರಾ ಕಡಿಮೆ.

ವೇಗವಾಗಿ ಮುಂದೆ ಸಾಗಿದ ಈತ ಎದುರಗಡೆ ಬಂದ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಸೈಡ್‌ಗೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲಿಂದ ಮತ್ತೆ ತಪ್ಪಿಸಿಕೊಂಡು ಮಿಂಚಿನ ವೇಗದಲ್ಲಿ ಸಾಗಿದ್ದಾನೆ. ಈತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆದರೆ ಈತನ ಬೈಕ್‌ನಲ್ಲಿದ ಗರ್ಲ್‌ಪ್ರೆಂಡ್ ರಸ್ತೆಯಲ್ಲಿ ನೋವು ಹಾಗೂ ಅವಮಾನದಿಂದ ಅತ್ತಿದ್ದಾಳೆ. ಈಕೆಯನ್ನು ಸಂತೈಸಿದ ಟ್ರಾಫಿಕ್ ಪೊಲೀಸ್ ಹತ್ತಿರದ ಶಾಪ್ ಒಂದಕ್ಕೆ ಕರೆದೊಯ್ದು ಕೂರಿಸಿ ನೀರು ಕುಡಿಸಿದ್ದಾರೆ.

ಕೋಲ್ಕಾತ್ತಾದಲ್ಲಿ ಈ ಘಟನೆ ನಡೆದಿದ್ದು, 500 ರೂಪಾಯಿ ಚಲನ್‌ಗಾಗಿ ಪ್ರೀತಿಸಿದ ಹುಡುಗಿಯನ್ನು ನೆಲಕ್ಕುರುಳಿಸಿ ಹೋದ ಈತ ಟ್ರಾಫಿಕ್ ಮಾತ್ರವಲ್ಲ, ಹಲವು ನಿಯಮ ಉಲ್ಲಂಘಿಸುತ್ತಾನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹುಡುಗಿಯರು ಬೈಕ್ ಹಿಂದೆ ಕೂರುವಾಗ ಹುಡಗನ ಪರ್ಸ್‌ನಲ್ಲಿ ಹಣವಿದೆಯಾ ಅನ್ನೋದು ಮಾತ್ರವಲ್ಲ, ಬೈಕ್‌ ದಾಖಲೆ ಪತ್ರ ಇದೆಯಾ ಅನ್ನೋದನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

See also  ಏರ್ ಶೋಗಿಂತ ಮುಂಚೆ ಬೆಂಗಳೂರಿನ 21 ಕೆರೆಗಳಲ್ಲಿ ಮೀನುಗಾರಿಕೆ ನಿಷೇಧಿಸಿದ್ದೇಕೆ..? ಮೀನುಗಾರಿಕಾ ಇಲಾಖೆ ಆದೇಶ..!
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget