ಕರಾವಳಿಸುಳ್ಯ

Chaitra Kundapura MLA ticket cheating case:ಹಣವೇ ಬಿಜೆಪಿಯಲ್ಲಿ ಪ್ರಧಾನ ಅಲ್ಲ,ಹಾಗಿದ್ರೆ ಸುಳ್ಯದ ಟಿಕೆಟ್ ಬಡ ಮಹಿಳೆ ಭಾಗೀರಥಿಗೆ ಸಿಗುತ್ತಿರಲಿಲ್ಲ-ಮಂಗಳೂರಿನಲ್ಲಿ ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿಕೆ

228

ನ್ಯೂಸ್ ನಾಟೌಟ್ : ಬೈಂದೂರು ಟಿಕೆಟ್ ಗಾಗಿ ಚೈತ್ರಾ ಕುಂದಾಪುರ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟು ವಿಚಾರಗಳು ಬಯಲಾಗುತ್ತಿದೆ.ದಿನಕ್ಕೊಂದು ರೋಚಕ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.ರಾಜಕೀಯ ನಾಯಕರು ಈ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ.

ಇದೀಗ ಮಂಗಳೂರಿನಲ್ಲಿ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ “ಹಣವೇ ಬಿಜೆಪಿಯಲ್ಲಿ ಪ್ರಧಾನ ಅಲ್ಲ ಎಂದಿದ್ದಾರೆ. ಹಾಗಾದ್ರೆ ಬೈಂದೂರಿನ ಟಿಕೆಟ್ ಬಡ ಕಾರ್ಯಕರ್ತನಿಗೆ ಸಿಗ್ತಾ ಇರಲಿಲ್ಲ” ಎಂದಿದ್ದಾರೆ.

ಹಣದಲ್ಲೇ ಎಲ್ಲವನ್ನೂ ಅಳೆಯೋದಾದ್ರೆ ಸುಳ್ಯದಲ್ಲಿ ಸಾಮಾನ್ಯ ಕಾರ್ಯಕರ್ತೆ ಹಾಗೂ ಬಡ ಮಹಿಳೆಯಾದ ಭಾಗೀರಥಿಮುರುಳ್ಯಗೆ ಟಿಕೆಟ್ ಸಿಗ್ತಾ ಇರಲಿಲ್ಲ.ಕೋಟಾ ಪೂಜಾರಿ, ಸುನೀಲ್ ಕುಮಾರ್, ನಳಿನ್, ಪ್ರತಾಪ್ ಸಿಂಹ ನಾಯಕರಾಗಿ ಮುಂದೆ ಬರುತ್ತಿರಲಿಲ್ಲ ಎಂದು ಖಡಕ್ ಆಗಿ ಮಾತನಾಡಿದ್ದಾರೆ.

ನೂರಾರು ಬಡ ಕಾರ್ಯಕರ್ತರು ನಮ್ಮಲ್ಲಿ ಎಂ.ಪಿ, ಎಂ.ಎಲ್.ಎ ಆಗಿರೋದನ್ನು ನೋಡಿದ್ದೇವೆ. ಇಲ್ಲಿ ಗೋವಿಂದ ಬಾಬು ಪೂಜಾರಿಯನ್ನು ಮೋಸ‌ದ ಕೂಪಕ್ಕೆ ತಳ್ಳಲಾಗಿದೆ. ಬುದ್ದಿವಂತರ ಜಿಲ್ಲೆ ಎನಿಸಿಕೊಂಡ ದ.ಕ ಮತ್ತು ಉಡುಪಿಯಂಥವರೇ ಮೋಸ ಹೋಗಿದ್ದಾರೆ.ಹಾಗೆನಾದ್ರೂ ಕನ್ಫ್ಯೂಸ್ ಇದ್ರೆ ಅವರು‌ ನೇರವಾಗಿ ಫೋನ್ ಮಾಡಿದ್ರೂ ಬಿಜೆಪಿ ನಾಯಕರು ಫೋನ್ ಗೆ ಸ್ಪಂದಿಸುತ್ತಿದ್ದರು ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೇ ಅವರ ಜೊತೆ ತುಳುವಲ್ಲೇ ಮಾತನಾಡ್ತಾ ಇದ್ರು.ನಳಿನ್ ಕಟೀಲ್, ಕೋಟಾ ಶ್ರೀನಿವಾಸ ಪೂಜಾರಿಯೂ ಮಾತನಾಡ್ತಾ ಇದ್ರು.ಅವರ ಬಳಿಯೇ ನೇರ ಫೋನ್ ಮಾಡಿ ಮಾತನಾಡುವ ಅವಕಾಶ ಗೋವಿಂದ ಬಾಬು ಪೂಜಾರಿಗೆ ಇತ್ತು.ಈ ಪ್ರಕರಣದ ಬಗ್ಗೆ ಸತ್ಯ ಬಹಿರಂಗ ಆಗಬೇಕು, ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಯಾರೇ ಇದ್ದರೂ ಸೂಕ್ತ ತನಿಖೆ ನಡೆದು ಕ್ರಮ ಆಗಲಿ.ಯಾರದ್ದೋ ಹೆಸರು ಕೇಳಿ ಬರ್ತಾ ಇದೆ ಅನ್ನೋದು ಬೇರೆ, ಸಮಗ್ರ ತನಿಖೆ ಆಗಲಿ.ಈ ಮೂಲಕ ಮೋಸ ಹೋದವರಿಗೂ ಇದೊಂದು ಪಾಠವಾಗಲಿ ಎಂದು ಆಗ್ರಹಿಸಿದರು.

See also  ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ಆಸುಪಾಸಿನಲ್ಲಿ ಸ್ವಚ್ಛತಾ ಕಾರ್ಯಕ್ರಮ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget