ಕರಾವಳಿಕ್ರೈಂರಾಜಕೀಯವಿಡಿಯೋವೈರಲ್ ನ್ಯೂಸ್

ಚೈತ್ರಾ ಕುಂದಾಪುರ ಕೋಟಿ ಕೋಟಿ ವಂಚನೆ ಪ್ರಕರಣದ ಆಡಿಯೋ ಲೀಕ್! ಸಂಘದ ಪ್ರಚಾರಕ ಎಂದು ಸುಳ್ಳು ಹೇಳಿದ್ದ ವಿಶ್ವನಾಥ್ ಜೀ ಕೊನೆಯುಸಿರೆಳೆದಿದ್ದಾರೆ ಎಂದು ನಂಬಿಸಿದರಾ ಹಿಂದೂ ಹೋರಾಟಗಾರ್ತಿ? ಇಲ್ಲಿದೆ ವೈರಲ್ ಆಡಿಯೋ

ನ್ಯೂಸ್ ನಾಟೌಟ್ : ಸಾಮಾಜಿಕ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಬೈಂದೂರಿನ ಬಿಜೆಪಿ ಮುಖಂಡ ಮತ್ತು ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಸಂಗಡಿಗರೊಂದಿಗೆ ಸೇರಿಕೊಂಡು ಸುಮಾರು 7 ಕೋಟಿ ವಂಚಿಸಿದ ಆರೋಪದಡಿ ಸಿಸಿಬಿ ಪೊಲೀಸರು ಬಂಧಿಸಿದ ಬೆನ್ನಲ್ಲೇ ಚೈತ್ರಾ ಕುಂದಾಪುರ ಹಾಗೂ ಉದ್ಯಮಿಯ ಆಪ್ತ ಪ್ರಸಾದ್ ಬೈಂದೂರು ಪೋನ್ ಕಾಲ್‌ನಲ್ಲಿ ಮಾತನಾಡಿದ ಆಡಿಯೋ ವೈರಲ್ ಆಗಿದೆ.

ಕುಂದಾಪುರ ಹಾಗೂ ಪ್ರಸಾದ್ ಬೈಂದೂರು ಪೋನ್ ಕಾಲ್‌ನಲ್ಲಿ ಮಾತನಾಡಿದ ಆಡಿಯೋ ವೈರಲ್ ಇದಾಗಿದ್ದು, ಸಂಘದ ಪ್ರಚಾರಕ ಎಂದು ಸುಳ್ಳು ಹೇಳಿದ್ದ ವಿಶ್ವನಾಥ್ ಜೀ ಸಾವನ್ನಪ್ಪಿದ್ದಾರೆ ಎನ್ನುವ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಾಶ್ಮೀರದಲ್ಲಿ ವಿಶ್ವನಾಥ್ ಜೀ ಸಾ* ವನ್ನಪ್ಪಿದ್ದಾರೆ ಎಂದು ನಂಬಿಸುತ್ತಿರುವ ಆಡಿಯೋ ಇದಾಗಿದೆ ಎಂದು ಹೇಳಲಾಗಿದೆ. ಪ್ರಸಾದ್ ಬೈಂದೂರು ಗೋವಿಂದ ಬಾಬು ಪೂಜಾರಿ ಜೊತೆಗೆ ಇರುತ್ತಿದ್ದ ಯುವಕ ಎನ್ನಾಗಿದ್ದು, ಚೈತ್ರಾ ಕುಂದಾಪುರ ಈ ರೀತಿ ಮಾತನಾಡಿ ಸಂಘದ ಪ್ರಚಾರಕ ಅಂತ ಸುಳ್ಳ ಹೇಳಿದ್ದ ವಿಶ್ವನಾಥ್ ಜೀ ಕೊನೆಯುಸಿರೆಳೆದಿದ್ದಾರೆ ಎಂದು ಹಣ ನೀಡಿದ್ದ ಗೋವಿಂದ ಬಾಬು ಪೂಜಾರಿ ಜೊತೆಗಿನ ಹುಡುಗನಿಗೆ ಮತ್ತು ಗೋವಿಂದ ಪೂಜಾರಿಗೆ ನಂಬಿಸಿದ್ದಾರೆ ಎನ್ನಲಾಗಿದೆ.

ಈಕೆಯ ಜೊತೆಗೆ ಮತ್ತಿಬ್ಬರು ಆರೋಪಿಗಳನ್ನೂ ವಶಕ್ಕೆ ಪಡೆಯಲಾಗಿದ್ದು, ಸದ್ಯ ಪ್ರಕರಣದಲ್ಲಿ ಚೈತ್ರ ಜೊತೆಗೆ ಪ್ರಸಾದ್, ಗಗನ್ ಕಡೂರು, ಪ್ರಜ್ವಲ್ ಶೆಟ್ಟಿ ಆರ್ ಎಸ್ ಧನರಾಜ್, ರಮೇಶ್, ಶ್ರೀಕಾಂತ್ ರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ, ಇಂದು ಸಂಜೆ ಚೈತ್ರ ಕುಂದಾಪುರ ವಿಚಾರಣೆ ನಡೆಯಲಿದೆ ಎನ್ನಲಾಗಿದೆ.

Related posts

ಮನೆ ಮುಂದೆ ಆಟವಾಡುತ್ತಿದ್ದ ಕಂದಮ್ಮಗಳ ಮೇಲೆ ಚಲಿಸಿದ ಟಿಪ್ಪರ್..! ಮುಂದೇನಾಯ್ತು..?

ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತನಿಗೆ ಪಕ್ಷ ಸೋತಾಗ ನಮ್ಮ ಮೇಲೆ ಸಿಟ್ಟನ್ನು ತೀಕ್ಷ್ಣವಾಗಿ ಹೊರ ಹಾಕುವ ಹಕ್ಕಿದೆ-ಪ್ರತಾಪ ಸಿಂಹ

ಆಸ್ಪತ್ರೆಗೆ ಬಾಂಬ್​ ಬೆದರಿಕೆ..! ರೋಗಿಗಳನ್ನು ಹೊರಗೆ ಕಳುಹಿಸಿದ ಆಸ್ಪತ್ರೆ ಸಿಬ್ಬಂದಿ..!