ಕರಾವಳಿ

ಉಡುಪಿ: ಮೈಗೆ ಗ್ರೀಸ್ ಹಚ್ಚಿಕೊಂಡು ಚಡ್ಡಿಯಲ್ಲಿ ಕಳ್ಳತನಕ್ಕಿಳಿದ ಗ್ಯಾಂಗ್..!ಯಾರಿವರು? ಸಿಸಿಟಿವಿಯಲ್ಲಿ ದೃಶ್ಯ ಸೆರೆ

215

ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ.ಕಳ್ಳರು ನಾನಾ ತಂತ್ರಗಳ ಮೂಲಕ ಕಳ್ಳತನ ಮಾಡಲು ಶುರು ಮಾಡಿದ್ದಾರೆ.ಆದರೆ ಇಲ್ಲೊಂದು ಕಳ್ಳರ ಗ್ಯಾಂಗ್ ಲಕ್ಷಾಂತರ ರೂ. ಹಣವನ್ನು ಲಪಟಾಯಿಸಿದ್ದು,ಅವರ ಕಳ್ಳತನ ಮಾಡೋದಕ್ಕೆ ಯಾವ ತಂತ್ರ ಅನುಸರಿಸಿದ್ರು ಅನ್ನೊದರ ವಿಷಯ ಗೊತ್ತಾದ್ರೆ ನಿಮ್ಗೂ ಶಾಕ್ ಆಗುತ್ತೆ..!ಅಂದ ಹಾಗೆ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿಯೂ ಸೆರೆಯಾಗಿದೆ.

ಈ ಘಟನೆ ವರದಿಯಾಗಿದ್ದು, ಕರಾವಳಿ ಜಿಲ್ಲೆ ಉಡುಪಿಯಲ್ಲಿ (Udupi).ಉತ್ತರ ಭಾರತದ ಕಿಲಾಡಿ ಕಳ್ಳರ ಗ್ಯಾಂಗ್ ಹೋಲುವ ತಂಡವೊಂದು ಹುಟ್ಟಿಕೊಂಡಿದ್ದು, ಕಳ್ಳರ ಗ್ಯಾಂಗ್ ಮೈಗೆ ಎಣ್ಣೆ, ಗ್ರೀಸ್ ಹಚ್ಚಿಕೊಂಡು ಬಂದು ಲಕ್ಷಾಂತರ ರೂ. ಹಣ ಲಪಟಾಯಿಸಿ ಪರಾರಿಯಾಗಿದೆ..!ಉಡುಪಿಯ ಸಂತಕಟ್ಟೆಯಲ್ಲಿನ ಬೇಕರಿ ಒಂದರ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಕಳ್ಳರು ಕೇವಲ ಚಡ್ಡಿಯನ್ನು ಹಾಕಿಕೊಂಡು, ಮೈ ತುಂಬಾ ಎಣ್ಣೆ ಹಚ್ಚಿಕೊಳ್ಳುತ್ತಿರುವ ದೃಶ್ಯಗಳು ಲಭ್ಯವಾಗಿದೆ. ಮನೆಮಂದಿ ನಿದ್ದೆಯಲ್ಲಿರುವಾಗ ಬಾಗಿಲನ್ನು ಒಡೆದು ಒಳಪ್ರವೇಶಿಸಿದ ಕಳ್ಳರು 2.5 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿಯನ್ನೂ ಕದ್ದಿದ್ದಾರೆ. ಇದರ ಆಧಾರದಲ್ಲಿ ಉಡುಪಿಯಲ್ಲೊಂದು ನಟೋರಿಯಸ್ ಗ್ಯಾಂಗ್ ಸಕ್ರಿಯವಾಗಿರುವುದು ಖಚಿತಗೊಂಡಿದೆ.

ಪೊಲೀಸರ ನಿದ್ದೆಗೆಡಿಸಿದ ಈ ತಂಡ ಸೊಂಟಕ್ಕೆ ಎರಡು ಚಪ್ಪಲಿಯನ್ನು ಸಿಕ್ಕಿಸಿಕೊಂಡು ಕಸುಬಿಗೆ ಇಳಿಯುತ್ತಿದೆ.ಕೃತ್ಯ ನಡೆಸಿದ ಸ್ಥಳದಲ್ಲಿ ಒಂದು ಚಪ್ಪಲಿಯನ್ನು ಬಿಟ್ಟು ಹೋಗುತ್ತಿದೆ.ಇದೀಗ ಪೊಲಿಸರು ನಗರದಲ್ಲಿ ನಡೆದ ಮನೆಗಳ್ಳತನ ಪ್ರಕರಣದಲ್ಲಿ ಹಲವಾರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪೊಲೀಸ್ (Police) ಗಸ್ತು ಹೆಚ್ಚಿಸಬೇಕು ಎಂಬ ಒತ್ತಾಯ ಜನರಿಂದ ಕೇಳಿಬಂದಿದೆ.

See also  ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ - ಕಾಲೇಜಿಗೆ ನಾಳೆಯೂ ( ಆ.2) ರಜೆ, ಜಿಲ್ಲಾಧಿಕಾರಿ ಘೋಷಣೆ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget