Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಚಾಕೊಲೇಟ್ ಕದ್ದಿದ್ದಕ್ಕೆ 5 ಬಾಲಕರನ್ನು ಬೆತ್ತಲೆ ಮೆರವಣಿಗೆ ಮಾಡಿದ ಅಂಗಡಿ ಮಾಲೀಕ..! ಮಕ್ಕಳ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಅವಮಾನ..!

850

ನ್ಯೂಸ್ ನಾಟೌಟ್ : ಚಾಕೊಲೇಟ್ ಕದ್ದಿದ್ದಾರೆ ಎಂಬ ಆರೋಪದ ಮೇಲೆ ಗ್ರಾಮದ 5 ಬಾಲಕರನ್ನು ಬೆತ್ತಲೆಗೊಳಿಸಿ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ನಗರ ತುಂಬಾ ಮೆರವಣಿಗೆ ಮಾಡಿದ ಆರೋಪದ ಮೇಲೆ ಅಂಗಡಿ ಮಾಲೀಕ ಸೇರಿ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಬಿಹಾರದ ಸೀತಾಮರ್ಹಿಯ ಮಲ್ಲಾಹಿ ಗ್ರಾಮದಲ್ಲಿ ನಡೆದಿದೆ.

ಬುಧವಾರ ರಾತ್ರಿ(ಜೂ.4) ಇಲ್ಲಿನ ದಿನಸಿ ಅಂಗಡಿಯೊಂದರಲ್ಲಿ ಚಾಕೊಲೇಟ್ ಕಳ್ಳತನವಾಗಿದೆ ಎಂದು ಆರೋಪಿಸಿ ಗ್ರಾಮದ ಐವರು ಬಾಲಕರನ್ನು ಅಂಗಡಿ ಮಾಲೀಕ ನಾಗೇಶ್ವರ ಶರ್ಮಾ ತನ್ನ ಅಂಗಡಿಗೆ ಕರೆದುಕೊಂಡು ಬಂದು ಅವರ ಮೇಲೆ ಹಲ್ಲೆ ನಡೆಸಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಓರ್ವ ಬಾಲಕ ನಾನು ಒಂದು ಚಾಕೊಲೇಟ್ ಮಾತ್ರ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ ಇದಾದ ಬಳಿಕ ಅಂಗಡಿ ಮಾಲೀಕ ಐವರು ಬಾಲಕರನ್ನು ಬೆತ್ತಲೆಗೊಳಿಸಿ ಮುಖಕ್ಕೆ ಸುಣ್ಣದಿಂದ ಬಣ್ಣ ಬಳಿದು ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಪೇಟೆ ತುಂಬಾ ಮೆರವಣಿಗೆ ನಡೆಸಿದ್ದಾನೆ. ಅಷ್ಟು ಮಾತ್ರವಲ್ಲದೆ ಇದೆಲ್ಲವನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ಬಾಲಕರನ್ನು ಬೆತ್ತಲೆಗೊಳಿಸಿ ನಗರತುಂಬಾ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ದೂರು ದಾಖಲಿಸಿಕೊಂಡು ಅಂಗಡಿ ಮಾಲೀಕ ನಾಗೇಶ್ವರ ಶರ್ಮಾ, ಅವರ ಮಗ ಪ್ರಕಾಶ್ ಕುಮಾರ್ ಮತ್ತು ವಿಡಿಯೋ ಮಾಡಿದ ಗ್ರಾಮಸ್ಥ ಕೃಷ್ಣ ಕುಮಾರ್ ಎಂಬವರನ್ನು ಬಂಧಿಸಲಾಗಿದೆ.

ಪಹಲ್ಗಾಮ್ ದಾಳಿ ಬಳಿಕ ಕಾಶ್ಮೀರಕ್ಕೆ ಪ್ರಧಾನಿ ಮೋದಿ ಮೊದಲ ಭೇಟಿ..! ಐಫೆಲ್ ಟವರ್‌ ಗಿಂತಲೂ ಎತ್ತರದ ರೈಲ್ವೆ ಬ್ರಿಡ್ಜ್​ ಉದ್ಘಾಟನೆ

ಗೆಳೆಯನಿಂದ ತನ್ನ 13 ವರ್ಷದ ಮಗಳನ್ನೇ ರೇಪ್‌ ಮಾಡಿಸಿದಾಕೆ ಅರೆಸ್ಟ್..! ಇಲ್ಲಿದೆ ಮನಕಲಕುವ ಘಟನೆ..!

See also  ಅರಂತೋಡು: ಬೆಂಕಿ ದುರಂತ, ತಪ್ಪಿದ ಅನಾಹುತ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget