ನ್ಯೂಸ್ ನಾಟೌಟ್: ಸಾರ್ವಜನಿಕ ಸ್ಥಳಗಳಲ್ಲಿ ಜನಸಾಮಾನ್ಯರಿಗೆ ಧೂಮಪಾನ, ತಂಬಾಕಿನಿಂದ ತೊಂದರೆ ಆಗುತ್ತಿದ್ದರೆ, ಅಂತಹ ವ್ಯಕ್ತಿಯ ಫೋಟೋವನ್ನು ಸ್ಟಾಪ್ ಟೊಬ್ಯಾಕೋ ಆ್ಯಪ್ ನಲ್ಲಿ ನೀವು ಅಪ್ ಲೋಡ್ ಮಾಡಬಹುದಾಗಿದೆ. ಹೀಗೆ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಹತ್ತಿರದಲ್ಲಿರುವ ಅಧಿಕಾರಿ ಸ್ಥಳಕ್ಕಾಗಮಿಸಿ ದಂಡ ವಿಧಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಇದೇ ತಪ್ಪು ಪದೇ ಪದೆ ಮರುಕಳಿಸಿದರೆ ಅಂಗಡಿ ಹಾಗೂ ಸಿಗರೇಟ್ ಸೇದಿದ ವ್ಯಕ್ತಿಯ ಮೇಲೆ ಎಫ್ ಐಆರ್ ಕೂಡ ದಾಖಲಿಸುವ ಅಧಿಕಾರವನ್ನು ಸರ್ಕಾರವು ಅಧಿಕಾರಿಗಳಿಗೆ ನೀಡಿದೆ ಎನ್ನಲಾಗಿದೆ.
ಸರ್ಕಾರ ಆ್ಯಪ್ ನಿರ್ವಹಣೆ ಮಾಡಲು ಗೂಗಲ್ ಗ್ಲೋಬಲ್ ಟಿವಿಎಸ್ ಎಂಬ ಸಂಸ್ಥೆಗೆ ಜವಾಬ್ದಾರಿ ವಹಿಸಿದೆ. ಸದ್ಯ ನವೀಕರಣ ಹಾಗೂ AI ತಂತ್ರಜ್ಞಾನ ಅಳವಡಿಸುವ ಕುರಿತು ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ್ಯಪ್ ಕಾರ್ಯವನ್ನು ನಿಲ್ಲಿಸಲಾಗಿದೆ. ಕೆಲ ದಿನಗಳಲ್ಲಿ ಸಾರ್ವಜನಿಕ ಬಳಕೆಗೆ ಈ ಆ್ಯಪ್ ಕಾರ್ಯಪ್ರವೃತ್ತಗೊಳ್ಳಲಿದೆ.
ತಾಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ಈಗಾಗಲೇ ದಾಳಿ ನಡೆಸಿ ದಂಡ ವಿಧಸುವ ಕೆಲಸವನ್ನು ಜಿಲ್ಲಾ ತಂಬಾಕು ಕೋಶದ ಅಧಿಕಾರಿಗಳು ಮಾಡುತ್ತಿದ್ದಾರೆ.
ತಂಬಾಕು ಮಾರಾಟ ಮಾಡಲು ಅಂಗಡಿಯವರು ಪರವಾನಿಗೆ ತೆಗೆದುಕೊಳ್ಳುವ ಕಾನೂನು ತರಲಾಗಿದೆ. ನಗರ ಪ್ರದೇಶ, ನಗರಸಭೆ ವ್ಯಾಪ್ತಿಗಳಲ್ಲಿ ಈ ತಂಬಾಕು ಮಾರಾಟ ಮಾಡಲು ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಯಾರು ಟ್ರೇಡ್ ಲೈಸೆನ್ಸ್ ಪಡೆದಿದ್ದಾರೆ, ಅವರು ತಂಬಾಕು ಮಾರಾಟ ಪರವಾನಿಗೆ ಕೂಡ ಪಡೆಯಬೇಕು.
ದಾವಣಗೆರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ಜಿ.ಡಿ.ರಾಘವನ್ ಪ್ರತಿಕ್ರಿಯಿಸಿ, “ಸ್ಟಾಪ್ ಟೊಬ್ಯಾಕೋ ಆ್ಯಪ್ ಜಾರಿಗೆ ತರಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗಳು ಧೂಮಪಾನ ಮಾಡುವ, ತಂಬಾಕು ಮಿಶ್ರಿತ ಉತ್ಪನ್ನಗಳನ್ನು ಸೇವಿಸುವವರ ಫೋಟೋ ತೆಗೆದು ಆ್ಯಪ್ ನಲ್ಲಿ ಜನಸಾಮಾನ್ಯರು ಅಪ್ ಲೋಡ್ ಮಾಡಿದರೆ ಸಾಕು, ತಂಬಾಕು ಕೋಶಾಧಿಕಾರಿ ಸ್ಥಳಕ್ಕಾಗಮಿಸಿ, ತಕ್ಕ ದಂಡ ವಿಧಿಸಲಿದ್ದಾರೆ. ಹಾಗೆಯೇ, ಎಫ್ ಐಆರ್ ದಾಖಲಿಸುವ ಅಧಿಕಾರವನ್ನೂ ಅವರಿಗೆ ನೀಡಲಾಗಿದೆ. ಪ್ರಸ್ತುತ ದಿನಗಳಲ್ಲಿ ಟ್ರೇಡ್ ಲೈಸೆನ್ಸ್ ಪಡೆದವರು ತಂಬಾಕು ಮಾರಾಟ ಮಾಡುವ ಪರವಾನಿಗೆ ಪಡೆಯುವುದು ಕಡ್ಡಾಯ” ಎಂದಿದ್ದಾರೆ.
ತಾಲಿಬಾನ್ ವಿದೇಶಾಂಗ ಸಚಿವರ ಜೊತೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮಾತುಕತೆ..! ಇತಿಹಾಸದಲ್ಲೇ ಮೊದಲ ಸಂಭಾಷಣೆ..!