ಕ್ರೈಂವಿಡಿಯೋವೈರಲ್ ನ್ಯೂಸ್

ಹಾಡಹಗಲೇ ಬಾಲಕನ ಅಪಹರಣಕ್ಕೆ ಯತ್ನ! ಇಲ್ಲಿದೆ ವೈರಲ್ ವಿಡಿಯೋ!

294

ನ್ಯೂಸ್ ನಾಟೌಟ್: ಅಪರಿಚಿತ ವ್ಯಕ್ತಿಯೋರ್ವ ಹಾಡಹಗಲೇ ಪುಟ್ಟ ಬಾಲಕನನ್ನು ಅಪಹರಿಸಲು ಯತ್ನಿಸಿದ್ದು, ಪುಟ್ಟ ಪೋರ ಕೈಯಿಂದ ತಪ್ಪಿಸಿಕೊಂಡ ಘಟನೆ ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿ ಮಾ.26ರಂದು ನಡೆದಿದೆ.

ಫುಟ್‌ಪಾತ್ ನಲ್ಲಿ ಗೆಳೆಯರ ಜತೆಗೆ ಆಟವಾಡುತ್ತಿದ್ದ ಮಗುವನ್ನು ಅಪಹರಿಸಲು ಯತ್ನಸಿದ ವ್ಯಕ್ತಿ ವಿಫಲನಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿದೆ.

ಮಗುವನ್ನು ಅಪಹರಿಸಿ ಹೆಗಲ ಮೇಲೆ ಎತ್ತಿಕೊಂಡು ವ್ಯಕ್ತಿ ವೇಗವಾಗಿ ಓಡುತ್ತಾನೆ, ಬಾಲಕ ನುಸುಳಿಕೊಂಡು ಹೆಗಲಿನಿಂದ ಕೆಳಗೆ ಹಾರಿ ಚಾಣಾಕ್ಷತೆಯಿಂದ ತಪ್ಪಿಸಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಹಸ ಮೆರೆದು ಧೈರ್ಯ ಪ್ರದರ್ಶಿಸಿದ ಬಾಲಕ ಯುಕೆಜಿ ವಿದ್ಯಾರ್ಥಿಯಾಗಿದ್ದು, ಬಾಲಕನ ಸಾಹಸಕ್ಕೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಜನನಿಬಿಡ ಪ್ರದೇಶದಲ್ಲಿ ಸಿನಿಮೀಯ ರೀತಿಯಲ್ಲಿ ಅಪಹರಿಸಲು ನೋಡಿದ ಈ ಘಟನೆ ಯಾರ ಗಮನಕ್ಕೂ ಬಾರದಿದ್ದರೂ ಅಪಹರಣಕ್ಕೆ ಯತ್ನಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

See also  ಲಾಂಗ್‌ ನಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿದ್ದ ಆಟೋ ಚಾಲಕ ಅರೆಸ್ಟ್..! ವಿಡಿಯೋ ಹರಿಬಿಟ್ಟಿದ್ದ ಚಾಲಕ..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget