ನ್ಯೂಸ್ ನಾಟೌಟ್ : ಬೆಂಗಳೂರಿನ ಕಮ್ಮನಹಳ್ಳಿಯ ಓಲ್ಡ್ ಚರ್ಚ್ ರಸ್ತೆಯಲ್ಲಿರುವ ನಿವಾಸಿಯೊಬ್ಬರ ಮನೆಯಲ್ಲಿ ಬೆಕ್ಕು ಕಳ್ಳತನವಾಗಿದೆ. ಮಾಲೀಕರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಹೀಗಾಗಿ ಯುವತಿಯೊಬ್ಬಳು ಬೆಕ್ಕಿನ ಹುಡುಕಾಟಕ್ಕಾಗಿ ಇನ್ಸ್ಟಾ ದಲ್ಲಿ ಪೇಜ್ ಕ್ರಿಯೇಟ್ ಮಾಡಿ ಕಳ್ಳಿಯರ ವಿಡಿಯೋ ಶೇರ್ ಮಾಡಿದ್ದಾರೆ.
‘Please Identify 3 Girls’ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಿದ್ರು. ಕಮ್ಮನಹಳ್ಳಿಯ ಓಲ್ಡ್ ಚರ್ಚ್ ರಸ್ತೆಯಲ್ಲಿರುವ ಮನೆಯ ಫಸ್ಟ್ ಫ್ಲೋರ್ ನಲ್ಲಿ ಇಬ್ಬರು ಮಹಿಳೆಯರು ಸೇರಿ ಬೆಕ್ಕನ್ನು ಕದ್ದಿದ್ದಾರೆ ಎನ್ನಲಾಗಿದೆ. ಬೆಕ್ಕು ಹಿಡಿದುಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
View this post on Instagram
ಇವರ ಜೊತೆ ಒಬ್ಬ ಬಾಲಕಿ ಕೂಡ ಇದ್ದಾಳೆ. ಬೆಕ್ಕನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಿಸಿಟಿವಿ ದೃಶ್ಯವನ್ನು ಸಾಕ್ಷಿಯಾಗಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ಬೆಕ್ಕನ್ನು ಮರಳಿ ಹಿಂದಿರುಗಿಸಲು ಯುವತಿ ಮನವಿ ಮಾಡಿದ್ದಾಳೆ.