Latestಕರಾವಳಿಕೇರಳಕ್ರೈಂವಿಡಿಯೋವೈರಲ್ ನ್ಯೂಸ್

ರಸ್ತೆಯಲ್ಲಿ ಗಾಯಗೊಂಡ ಬೆಕ್ಕಿನ ಮರಿಯನ್ನು ರಕ್ಷಿಸಲು ಬಂದವನಿಗೆ ಲಾರಿ ಡಿಕ್ಕಿ..! ವ್ಯಕ್ತಿ ಸಾವು, ಮನಕಲಕುವ ವಿಡಿಯೋ ವೈರಲ್

599

ನ್ಯೂಸ್ ನಾಟೌಟ್: ರಸ್ತೆ ಅಪಘಾತದಲ್ಲಿ ಗಾಯಗೊಂಡು ರಸ್ತೆ ಮಧ್ಯೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಣೆ ಮಾಡಲು ಹೋದ ವ್ಯಕ್ತಿಯೊಬ್ಬರು ಟ್ರಕ್ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಕೇರಳದಲ್ಲಿ ಮಂಗಳವಾರ(ಎ.8 ) ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಒಲುಕ್ಕರ ನಿವಾಸಿ ಸಿಜೋ ತಿಮೋತಿ(44) ಎಂದು ಗುರುತಿಸಲಾಗಿದೆ.

ರಾತ್ರಿ 9.41ಕ್ಕೆ ಮನ್ನುತಿ ಕಳತೋಡು ಸರ್ಕಲ್ ಬಳಿ ಸಿಜೋ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆ ಮಧ್ಯ ಬೆಕ್ಕಿನ ಮರಿಯೊಂದು ಅಪಘಾತಕ್ಕೆ ಸಿಲುಕಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಸಿಜೋ ಬೈಕ್ ರಸ್ತೆ ಬದಿ ನಿಲ್ಲಿಸಿ ರಸ್ತೆ ಮಧ್ಯೆ ಸಿಲುಕಿದ್ದ ಬೆಕ್ಕಿನ ಮರಿಯ ರಕ್ಷಣೆಗೆ ಮುಂದಾಗಿದ್ದಾರೆ.

ಈ ವೇಳೆ ವೇಗವಾಗಿ ಬಂದ ಟ್ರಕ್ ಸಿಜೋ ಎಂಬವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಸೆಯಲ್ಪಟ್ಟ ಸಿಜೋ ಎದುರಿನಿಂದ ಬರುತ್ತಿದ್ದ ಕಾರಿನಡಿ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿತಾದರೂ ಅಷ್ಟೋತ್ತಿಗಾಗಲೇ ಸಿಜೋ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದರ್ಶನ್ ಕೋರ್ಟ್‌ಗೆ ಬೆನ್ನು ನೋವಿನ ನೆಪ ಹೇಳಿ ಗೈರು, ಸಿನಿಮಾ ವೀಕ್ಷಣೆಗೆ ಹಾಜರು..! ಮಾಲ್‌ ನಲ್ಲಿ ವಾಮನ ಚಿತ್ರದ ವಿಶೇಷ ಶೋ

ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜಿಯೋದಿಂದ ಉಚಿತ ಇಂಟರ್ನೆಟ್..! 2000 ಬೂಸ್ಟರ್‌ ಸೆಲ್‌ ಗಳನ್ನು ಅಳವಡಿಸಿದ ಜಿಯೋ..!

19 ವರ್ಷದ ಯುವತಿ ಮೇಲೆ 7 ದಿನ 23 ಮಂದಿಯಿಂದ ಅತ್ಯಾಚಾರ..! ಇನ್ ಸ್ಟಾಗ್ರಾಮ್ ಸ್ನೇಹಿತರಿಂದಲೇ ಕೃತ್ಯ..!

See also  ಪಿಕಪ್ ವಾಹನದೊಳಗೆ ನುಗ್ಗಿದ ಮರದ ದಿಮ್ಮಿ,ಅದೃಷ್ಟವಶಾತ್ ಪಾರಾದ ಚಾಲಕ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget