ವಿಡಿಯೋವೈರಲ್ ನ್ಯೂಸ್

ತಾಯಿಯೆಂದು ಭಾವಿಸಿ ಬೆಕ್ಕಿನ ಹೊಟ್ಟೆಯನ್ನು ಅಪ್ಪಿಕೊಂಡ ಮಂಗದ ಮರಿ..! ವೀಡಿಯೋ ವೈರಲ್

279

ನ್ಯೂಸ್ ನಾಟೌಟ್: ಸಾಮಾಜಿಕ ಮಾಧ್ಯಮದಲ್ಲಿ ಜಗತ್ತಿನ ಅನನ್ಯ ಮತ್ತು ನಂಬಲಾಗದಷ್ಟು ಅದ್ಭುತವಾದ ಸಂಬಂಧಗಳನ್ನು ತೋರಿಸುವ ಪ್ರಾಣಿಗಳ ವೀಡಿಯೊಗಳು ವೈರಲ್ ಆಗುತ್ತಿವೆ. ಪ್ರಾಣಿಗಳು ಇತರ ಜಾತಿಯ ಪ್ರಾಣಿಗಳೊಂದಿಗೆ ಬೆರೆಯುವುದು ಅಪರೂಪ, ಆದರೆ ಅಂತಹ ವಿಚಿತ್ರ ಘಟನೆಯೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಮರಿ ಕೋತಿ ಮತ್ತು ಬೆಕ್ಕಿನ ನಡುವಿನ ಪ್ರಾಮಾಣಿಕ ಸ್ನೇಹವನ್ನು ತೋರಿಸುವ ಈ ವಿಡಿಯೋ ನೆಟ್ಟಿಗರಿಂದ ಪ್ರಶಂಸೆಯ ಮಹಾಪೂರವೇ ಪಡೆದಿದೆ.

ವೀಡಿಯೊದಲ್ಲಿ ಬೆಕ್ಕೊಂದು ಬೀದಿಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಿಸುತ್ತದೆ. ಆದರೆ, ಬೆಕ್ಕಿನ ಹೊಟ್ಟೆಯನ್ನು ಮುದ್ದಾದ ಮಂಗದ ಮರಿಯೊಂದು ತಾಯಿಯನ್ನು ಅಪ್ಪಿಕೊಂಡಂತೆ ಅಪ್ಪಿಕೊಂಡಿದೆ, ಬೆಕ್ಕು ಕುಡ ಪ್ರತಿರೋಧ ತೋರದೆ ಕರೆದೊಯ್ಯತ್ತಿದೆ. ಈ ಮುದ್ದಾದ ಸ್ನೇಹವು ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಹೃದಯಗಳನ್ನು ಗೆಲ್ಲುತ್ತಿದೆ.

ಇದನ್ನು ಟ್ವಿಟರ್‌ನಲ್ಲಿ “ಬೆಕ್ಕು ಮತ್ತು ಪುಟ್ಟ ಮಂಗ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. @Buitengebieden ಹಂಚಿಕೊಂಡಿರುವ ವೀಡಿಯೊ ಇದುವರೆಗೆ 8,81,200 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

See also  ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿದ್ದ ಕಾಲೇಜು ಯುವಕ! ಪೊಲೀಸರ ತನಿಖೆಯಲ್ಲಿ ಬಯಲಾಯ್ತು ರಹಸ್ಯ!
  Ad Widget   Ad Widget   Ad Widget   Ad Widget   Ad Widget   Ad Widget   Ad Widget