ನ್ಯೂಸ್ ನಾಟೌಟ್: ʼರೆಹನಾ ಹೈ ತೇರೆ ದಿಲ್ ಮೇʼ ಸಿನಿಮಾದ ಮೂಲಕ ಎಂಟ್ರಿ ಕೊಟ್ಟ ನಟಿ ದಿಯಾ ಮಿರ್ಜಾ (Dia Mirza) ಆ ಬಳಿಕ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
2019ರಲ್ಲಿ ʼಕಾಫಿರ್ʼ ಎಂಬ ವೆಬ್ ಸರಣಿಯಲ್ಲಿ ಅವರು ನಟಿಸಿದ್ದರು. ಈ ಚಿತ್ರ ಈಗ ಸಿನಿಮಾ ರೂಪದಲ್ಲಿ ತೆರೆ ಕಾಣಲು ಸಿದ್ಧವಾಗಿದೆ.
ಈ ಸರಣಿಯಲ್ಲಿ ದಿಯಾ ಕೈನಾಜ್ ಅಖ್ತರ್ ಎನ್ನುವ ಪಾತ್ರವನ್ನು ಮಾಡಿದ್ದರು. ಇದರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವಾಗುವ ಸನ್ನಿವೇಶವಿದೆ. ಈ ದೃಶ್ಯವನ್ನು ಚಿತ್ರೀಕರಿಸಿದ ಬಳಿಕ ದಿಯಾ ತಾನು ಯಾವ ರೀತಿ ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
“ಕಾಫಿರ್ ನಲ್ಲಿನ ಅತ್ಯಾಚಾರದ ದೃಶ್ಯ ಕಠಿಣವಾಗಿತ್ತು. ಈ ದೃಶ್ಯದ ಚಿತ್ರೀಕರಣದ ನಂತರ ನನ್ನ ದೇಹ ಸಂಪೂರ್ಣ ನಡುಗುತ್ತಿತ್ತು. ದೃಶ್ಯದ ಚಿತ್ರೀಕರಣದ ಬಳಿಕ ನನಗೆ ವಾಂತಿ ಆಗಿತ್ತು” ಎಂದು ದಿಯಾ ಹೇಳಿದ್ದಾರೆ.
“ ಅದು ಚಿತ್ರದಲ್ಲಿನ ದೃಶ್ಯವಾದರೂ ನನ್ನ ಮೇಲೆಯೇ ಆ ರೀತಿ ಆಗುತ್ತಿದೆ ಎನ್ನುವ ಭಾವನೆ ಬಂದಿತ್ತು. ನನ್ನನ್ನು ಅದು ತುಂಬಾ ಕಾಡಿತ್ತು. ಕಲಾವಿದರು ಕಥೆ ಮತ್ತು ಪಾತ್ರಕ್ಕೆ ನ್ಯಾಯ ಸಲ್ಲಿಸಲು ಈ ರೀತಿ ಮಾಡಬೇಕ. ಅದು ಕಲಾವಿದರ ಕರ್ತವ್ಯ ಕೂಡ ಹೌದು” ಎಂದು ದಿಯಾ ಹೇಳಿದ್ದಾರೆ.
ನಿಜ ಜೀವನದಲ್ಲಿ ನನಗೆ ತಾಯಿಯಾಗುವ ಮೊದಲೇ ನನಗೆ ಕೈನಾಜ್ ಪಾತ್ರ ತಾಯ್ತನದ ಅನುಭವ ನೀಡಿತು ಎಂದು ನಟಿ ಹೇಳಿದ್ದಾರೆ.