ವಿಡಿಯೋವೈರಲ್ ನ್ಯೂಸ್

Viral Video:ಮರದ ಎಲೆಗಳನ್ನು ತಿನ್ನುತ್ತಿರುವ ಸಿಂಹ..!,ವೈರಲ್ ವಿಡಿಯೋ ಇಲ್ಲಿದೆ ನೋಡಿ

ನ್ಯೂಸ್ ನಾಟೌಟ್ : ಪ್ರಕೃತಿಯಲ್ಲಿ ಎಂಥೆಂತ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಈ ಒಂದು ದೃಶ್ಯ ನೀವು ನೋಡಿದ್ರೆ ಬೆರಗಾಗ್ತೀರಿ.ಇದಕ್ಕೆ ಪುಷ್ಟಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಸಿಂಹವೊಂದು ಮರದ ಎಲೆಯನ್ನು ತಿನ್ನುತ್ತಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.

ಸಿಂಹ ಮಾಂಸಹಾರಿ ಪ್ರಾಣಿಯಾಗಿದ್ದು ಅದು ಮಾಂಸವನ್ನು ಮಾತ್ರ ಸೇವಿಸುತ್ತದೆ ಎಂಬ ವಿಚಾರ ನಮಗೆ ತಿಳಿದಿತ್ತು.ಆದರೆ ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಎಂಬುವರು ಶೇರ್​ ಮಾಡಿರುವ ವಿಡಿಯೋ ನೋಡಿದ್ರೆ ಒಂದು ಕ್ಷಣ ಗಾಬರಿಗೆ ಒಳಗಾಗ್ತೀವಿ.

ಬೆಕ್ಕುಗಳಿಗೆ ಹೊಟ್ಟೆನೋವು ಕಾಡಲಾರಂಭಿಸಿದಾಗ ಹುಲ್ಲು ತಿನ್ನುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತವೆ.ಸಿಂಹ ಕೂಡ ಅದೇ ಕಾರಣಕ್ಕೆ ಎಲೆಗಳನ್ನು ತಿನ್ನುತ್ತಿತ್ತೇ ಎನ್ನುವ ಪ್ರಶ್ನೆಗಳು ಎದ್ದಿವೆ. ಬೆಕ್ಕು ಮತ್ತು ಸಿಂಹ ಒಂದೇ ಕುಟುಂಬ ವರ್ಗಕ್ಕೆ ಸೇರಿರುವುದರಿಂದ ಈ ರೀತಿ ಎಲೆ ತಿಂದಿರಬಹುದು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

Related posts

ರಷ್ಯಾ ಸೇನೆಯಲ್ಲಿ ಸಿಲುಕಿದ್ದ ಕರ್ನಾಟಕದ 3 ಯುವಕರು ಮರಳಿ ಮನೆಗೆ, ಕೆಲಸದ ಆಮಿಷವೊಡ್ಡಿ ಹಣ ಪಡೆದು ರಷ್ಯಾಕ್ಕೆ ಕಳುಹಿಸಿದ್ದ ಏಜೆಂಟ್..!

ಕೊರಿಯಾದ ವ್ಲಾಗರ್‌ ಜೊತೆ ಅಸಭ್ಯವಾಗಿ ವರ್ತಿಸಿದ್ನಾ ಈ ವ್ಯಕ್ತಿ..? ಆಕೆ ವಿಡಿಯೋದಲ್ಲಿ ಹೇಳಿದ್ದೇನು? ಆರೋಪಿ ಅರೆಸ್ಟ್..!

Darshan Thoogudeepa: ಶವ ವಿಲೇವಾರಿಗೆ 30 ಲಕ್ಷಕ್ಕೆ ಡೀಲ್‌..! ಪೊಲೀಸರ ದಿಕ್ಕು ತಪ್ಪಿಸಲು ದರ್ಶನ್ ಮತ್ತು ಸಹಚರರಿಂದ ನಡೆದಿತ್ತು ರೋಚಕ ಪ್ಲಾನ್..!