ಕರಾವಳಿ

ಉಡುಪಿ:ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರ ಹೊಸ ಕಾರು ಹೇಗಿದೆ ಗೊತ್ತಾ? 62 ಕಿ.ಮೀ ಮೈಲೇಜ್, 3.3 ಕೋಟಿ ಬೆಲೆ..!ಕಾರಿನ ವಿಶೇಷತೆಗಳೇನು?ವಿಡಿಯೋ ವೀಕ್ಷಿಸಿ..

173

ನ್ಯೂಸ್ ನಾಟೌಟ್ : ಐಷಾರಾಮಿ ಕಾರುಗಳ ಪೈಕಿ BMW XM ಕಾರು ಭಾರಿ ಟ್ರೆಂಡ್ ಆಗುತ್ತಿದೆ. ಈ ಕಾರು ಖರೀದಿಸಲು ಹಲವರು ಮುಗಿ ಬೀಳುತ್ತಿದ್ದಾರೆ. ಇದೀಗ ಎಂಟಿಬಿ ನಾಗರಾಜ್ ಬಳಿಕ ಮತ್ತೋರ್ವ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಇದೇ ಕಾರು ಖರೀದಿಸಿದ್ದಾರೆ. ಹೌದು, ಹಲವು ವಿಶೇಷತೆ ಹೊಂದಿರುವ ಈ ಕಾರು ಇದೀಗ ಭಾರಿ ಸುದ್ದಿಯಲ್ಲಿದೆ.

ಅಂದ ಹಾಗೆ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು.ರಾಜಕೀಯದಲ್ಲಿಯೂ ಸಕ್ರಿಯ ನಾಯಕ.ವಿಶೇಷವೆಂದರೆ ಇವರು ಖರೀದಿಸಿರುವ ಹೊಸ BMW XM ಕಾರು ಒಂದು ಲೀಟರ್ ಪೆಟ್ರೋಲ್‌ಗೆ 62 ಕಿಲೋಮೀಟರ್ ಮೈಲೇಜ್ ನೀಡಲಿದೆಯಂತೆ.ಇದಕ್ಕೆ ಪ್ರಮುಖ ಕಾರಣ ಹೈಬ್ರಿಡ್ ಎಂಜಿನ್ ಹೊಂದಿದೆ. ಟ್ವಿನ್ ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ಜೊತೆ ಎಲೆಕ್ಟ್ರಿಕ್ ಮೋಟಾರು ಹೊಂದಿದೆ. ಹೀಗಾಗಿ ಇದರ ಮೈಲೇಜು ಬರೋಬ್ಬರಿ 62 ಕಿಲೋಮೀಟರ್ ಇದೆ ಎನ್ನಲಾಗಿದೆ.  

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿರುವ ಪ್ರಮೋದ್ ಮಧ್ವರಾಜ್ ಅವರು ” BMW ಕುಟುಂಬದ ಭಾಗವಾಗಿದೆ ಎಂದಿದ್ದಾರೆ.ಈ ಬಗ್ಗೆ ನಮ್ಗೆಲ್ಲರಿಗೂ ಹೆಮ್ಮೆ ಇದೆ ಎಂದು ಮಧ್ವರಾಜ್ ಹೇಳಿದ್ದಾರೆ.ಇತ್ತೀಚೆಗೆ ಬಿಜೆಪಿಯ ಹೊಸಕೋಟೆ ನಾಯಕ ಎಂಟಿಬಿ ನಾಗರಾಜ್ ಕೂಡ ಇದೇ ಕಾರು ಖರೀದಿಸಿದ್ದರು. ಕರ್ನಾಟಕದಲ್ಲಿ BMW XM ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದ್ದು, BMW XM ಕಾರು ಖರೀದಿಸಿದ ರಾಜಕೀಯ ನಾಯಕರ ಪಟ್ಟಿಗೆ ಪ್ರಮೋದ್ ಮಧ್ವರಾಜ್ ಕೂಡ ಸೇರಿಕೊಂಡಿದ್ದಾರೆ.ವಿಡಿಯೋ ವೀಕ್ಷಿಸಲು ಲಿಂಕ್ ಒತ್ತಿ

https://www.facebook.com/pramodmadhwaraj/videos/871820171304122/?ref=embed_video&t=3

https://www.facebook.com/pramodmadhwaraj/videos/871820171304122/?ref=embed_video&t=3

See also  ಚಿಕನ್​ ಪ್ರಿಯರಿಗೆ ಶಾಕ್, ಆತಂಕ ಸೃಷ್ಟಿಸುತ್ತಿದೆ ಹಕ್ಕಿಜ್ವರ..! ಕೋಳಿ ಮತ್ತು ಮೊಟ್ಟೆ ತಿನ್ನದಂತೆ ಜನರಿಗೆ ಸೂಚನೆ ನೀಡಿದ್ದೆಲ್ಲಿ..?
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget