ಕರಾವಳಿ

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಕಾಂಕ್ರಿಟ್ ಲಾರಿ, ತಾಯಿ-ಮಗಳು ಸಾವು

ನ್ಯೂಸ್ ನಾಟೌಟ್: ಮಗಳನ್ನು ಶಾಲೆಗೆ ಬಿಡುಲು ತೆರಳುತ್ತಿದ್ದಾಗ ಕಾಂಕ್ರಿಟ್ ಲಾರಿಯೊಂದು ಎದುರಿಗೆ ಬಂದು ಕಾರು ಮೇಲೆ ಉರುಳಿ ಬಿದ್ದು ತಾಯಿ-ಮಗು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಆನೇಕಲ್ ಕಗ್ಗಲಿಪುರ ಕ್ರಾಸ್‌ ಬಳಿ ಬುಧವಾರ ಬೆಳಿಗ್ಗೆ ಗಾಯತ್ರಿ ಕುಮಾರ್‌ ಮತ್ತು ಅವರ ಮಗಳು ಸುಮತಾ ಕುಮಾರ್‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬನ್ನೇರುಘಟ್ಟದ ಸಮೀಪದಲ್ಲಿರುವ ಗ್ರೀನ್‌ ಹುಡ್‌ ಹೈ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗಳು ಸುಮತಾಳನ್ನು ತಾಯಿ ಗಾಯತ್ರಿ ತಮ್ಮ ಕಾರಿನಲ್ಲಿ ಶಾಲೆಗೆ ಬಿಡಲು ಹೊರಟಿದ್ದರು. ಕಗ್ಗಲಿಪುರ ಕ್ರಾಸ್‌ ಬಳಿ ಬೆಳಗ್ಗೆ 8.30 ಗಂಟೆ ಸುಮಾರು ಎದುರಿನಿಂದ ಬಂದ ಕಾಂಕ್ರೀಟ್‌ ಲಾರಿ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಉರುಳಿ ಬಿದ್ದಿದೆ. ಲಾರಿ ಅಡಿ ಸಿಲುಕಿ ತಾಯಿ ಮತ್ತು ಮಗಳು ಕಾರಿನಲ್ಲಿಯೇ ಅಪ್ಪಚ್ಚಿಯಾಗಿದ್ದಾರೆ. ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸುಳ್ಯ : ಎನ್ನೆಂಸಿ ಭೌತಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮ

ಕೊಡಗಿನಲ್ಲಿ ಹುಲಿ ದಾಳಿ, ಎರಡು ಹಸು ಸಾವು

ಸ್ನೇಹ ಶಾಲೆಯಲ್ಲಿ ಉಚಿತ ಕಂಪ್ಯೂಟರ್ ಕೌಶಲ್ಯ ತರಬೇತಿ ಉದ್ಘಾಟನೆ