ಕ್ರೈಂಬೆಂಗಳೂರುವೈರಲ್ ನ್ಯೂಸ್

ಯುವತಿಯ ಕಾರು ಫಾಲೋ ಮಾಡಿ ಡೋರ್‌ ತೆಗೆಯಲು ಯತ್ನಿಸಿದ ಯುವಕರು..! ಆಳುತ್ತಲೇ ದೃಶ್ಯ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ ಯುವತಿ

196

ನ್ಯೂಸ್ ನಾಟೌಟ್: ಯುವತಿ ಕಾರನ್ನು ಚೇಸ್ ಮಾಡಿದ ಮೂವರು ಯುವಕರು ಪುಂಡಾಟ ಮೆರೆದ ಘಟನೆ ಬೆಂಗಳೂರಿನ ಕೋರಮಂಗದಲ್ಲಿ ಭಾನುವಾರ(ಮಾ.31) ರಾತ್ರಿ ನಡೆದಿದೆ. ಮಡಿವಾಳ ಸಿಗ್ನಲ್‌ನಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಯುವಕರಿಗೆ ಮತ್ತು ಕಾರಿನಲ್ಲಿದ್ದ ಯುವತಿಗೆ ಕಿರಿಕ್ ನಡೆದಿದೆ.

ನಂತರ ಕಾರನ್ನು ಚೇಸ್ ಮಾಡಿದ ಮೂವರು ಕಿರುಕುಳ ನೀಡಿದ್ದಾರೆ. ಮಡಿವಾಳ ಅಂಡರ್‌ಪಾಸ್‌ ಸೇತುವೆಯಿಂದ ಕೋರಮಂಗಲ 5ನೇ ಬ್ಲಾಕ್‌ವರೆಗೆ ಕಾರನ್ನು ಕಿಡಿಗೇಡಿಗಳು ಹಿಂಬಾಲಿಸಿದ್ದಾರೆ. ಅಷ್ಟೇ ಅಲ್ಲದೇ ಕೋರಮಂಗಲದಲ್ಲಿ ಕಾರು ಡೋರ್ ಓಪನ್ ಮಾಡಲು ಯತ್ನಿಸಿ ಕೋರಮಂಗಲ 5ನೇ ಬ್ಲಾಕ್‌ನಲ್ಲಿ ಪರಾರಿಯಾಗಿದ್ದಾರೆ.

ಯುವಕರು ಕಾರು ಫಾಲೋ ಮಾಡುವ ದೃಶ್ಯ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ ಯುವತಿ ಆಳುತ್ತಲೇ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ತೇಜಸ್, ಜಗನ್ನಾಥ ಬಂಧಿತ ಆರೋಪಿಗಳಾಗಿದ್ದು ಮತ್ತೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

See also  ದರ್ಶನ್ ಪ್ರಕರಣ: ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ರೂ. ನೆರವು ನೀಡಿದ ನಟ ವಿನೋದ್ ರಾಜ್, ಈ ಬಗ್ಗೆ ರೇಣುಕಾಸ್ವಾಮಿ ತಂದೆ ಹೇಳಿದ್ದೇನು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget