ಕಾಸರಗೋಡುಸುಳ್ಯ

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು!

ನ್ಯೂಸ್ ನಾಟೌಟ್: ವೇಗವಾಗಿ ಚಲಾಯಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕದ ಗುಡ್ಡವನ್ನೇರಿ ಪಲ್ಟಿಯಾದ ಘಟನೆ ಮಾ.21 ರ ಸಂಜೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಡ್ಕಾರ್ ಬಳಿ ಸಂಭವಿಸಿದೆ.

ನಾಲ್ಕು ಪ್ರಯಾಣಿಕರಿದ್ದ ಕಾರು ಕಾಸರಗೋಡಿನಿಂದ ಸುಳ್ಯದ ಕಡೆಗೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ವೇಗದ ಚಾಲನೆಯಿಂದ ಚಾಲಕ ಸಂಪೂರ್ಣ ನಿಯಂತ್ರಣ ಕಳೆದುಕೊಂಡು ರಸ್ತೆಯನ್ನು ಬಿಟ್ಟು ಗುಡ್ಡ ಏರಿ ಪಲ್ಟಿಯಾಗಿದೆ.

ಸದ್ಯ ಘಟನೆಯಿಂದ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಸುಳ್ಯ:ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ

5 ವರ್ಷ ಬಾಲಕಿಯ ಅಪಹರಿಸಿ ಮೇಲೆರಗಿದ ರಾಕ್ಷಸ,ಕಾಮತೃಷೆ ತೀರಿಸಿಕೊಂಡು ಕೊಂದು ಹೂತು ಹಾಕಿದ ಪಾಪಿ

ಸುಳ್ಯ: ಎನ್ನೆಂಸಿಯ ಯುವ ರೆಡ್‌ಕ್ರಾಸ್ ಘಟಕದ ನೂತನ ಕಾರ್ಯಕ್ರಮಾಧಿಕಾರಿಯಾಗಿ ಡಾ. ಅನುರಾಧಾ ಕುರುಂಜಿ ಅಧಿಕಾರ ಸ್ವೀಕಾರ