ಕ್ರೈಂವೈರಲ್ ನ್ಯೂಸ್

ಆ್ಯಪ್‌ ಮೂಲಕ ಬುಕ್‌ ಮಾಡಿ ಆ ಕ್ಯಾಬ್‌ನ್ನೇ ಕದ್ದ ಕ‍ಳ್ಳರು! ಇಲ್ಲಿದೆ ಖತರ್ನಾಕ್ ಕಳ್ಳರ ಸ್ಟೋರಿ!

349

ನ್ಯೂಸ್ ನಾಟೌಟ್ : ಆ್ಯಪ್ ಮೂಲಕ ಕ್ಯಾಬ್‌ ಬುಕ್‌ ಮಾಡಿದ್ದ ನಾಲ್ವರು, ಟ್ಯಾಕ್ಸಿ ಚಾಲಕನನ್ನ ಹೊರಗೆ ಎಳೆದುಹಾಕಿ ಕಾರನ್ನು ಕದ್ದೊಯ್ದಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ಬಾನುವಾರ ನಡೆದಿದೆ.

ಪಿಕಪ್‌ ಪಾಯಿಂಟ್‌ನಲ್ಲಿ ನಾಲ್ವರು ವ್ಯಕ್ತಿಗಳು ನಿಂತಿದ್ದು, ಒಟಿಪಿ ಹೇಳುವ ಮೊದಲು ಕ್ಯಾಬ್‌ ಡ್ರೈವರ್‌ನ್ನ ಕಾರಿನಿಂದ ಹೊರಬರಲು ಸೂಚಿಸಿದ್ದಾರೆ ಎಂದು ವರದಿ ತಿಳಿಸಿದೆ. ಅದರಂತೆ ಕಾರಿನಿಂದ ಕೆಳಗಿಳಿದ ಚಾಲಕನ ಕೈಯಲ್ಲಿದ್ದ ಕಾರಿನ ಕೀ ಕಿತ್ತುಕೊಂಡಿದ್ದು, ಬಳಿಕ ಅಲ್ಲಿಂದ ಕಾರನ್ನ ಕದ್ದು ಪರಾರಿಯಾಗಿದ್ದಾರೆ ಎಂದು ಕ್ಯಾಬ್‌ ಚಾಲಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗ್ತಿದೆ ಪೊಲೀಸರು ಮಾಹಿತಿ ನೀಡಿದ್ದಾರೆ.

See also  ಬಾಲ್ಯ ಸ್ನೇಹಿತೆಯನ್ನೇ ಅತ್ಯಾಚಾರ ಎಸಗಿ, ಬೆಂಕಿ ಹಚ್ಚಿ ಕೊಂದ 20ರ ಯುವಕ..! ವಿವಾಹವಾಗುವಂತೆ ಒತ್ತಾಯಿಸುತ್ತಿದ್ದ ಆಕೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget