Latestಕ್ರೈಂರಾಜ್ಯವೈರಲ್ ನ್ಯೂಸ್

ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು..! ಕರ್ನಾಟಕದ ಮೂವರು ಆಂಧ್ರದಲ್ಲಿ ಸಾವು..!

486

ನ್ಯೂಸ್‌ ನಾಟೌಟ್: ಕಾರು ಬಾವಿಗೆ ಉರುಳಿಬಿದ್ದು, ಕರ್ನಾಟಕದ 3 ಮಂದಿ ಸಾವನ್ನಪ್ಪಿದ ಘಟನೆ ಇಂದು(ಮೇ.18) ಆಂಧ್ರದ ಅನ್ನಮಯ್ಯ ಜಿಲ್ಲೆಯ ಕುರಪ್ಪಲ್ಲಿ ಗ್ರಾಮದ ಬಳಿ ನಡೆದಿದೆ.

ಚಿಂತಾಮಣಿ ತಾಲೂಕಿನ ಮುತ್ತಕದಲ್ಲಿ ಗ್ರಾಮದ ನಿವಾಸಿಗಳಾದ ಲೊಕೇಶ(34), ಚಂದನಹಳ್ಳಿ ಗ್ರಾಮದ ಶಿವಾನಂದ, ಕೋಲಾರ ಜಿಲ್ಲೆಯ ಸುಗಟೂರು ಗ್ರಾಮದ ಚಲಪತಿ ಮೃತರು ಎಂದು ಗುರುತಿಸಲಾಗಿದೆ. ಇನ್ನು ಈ ಘಟನೆಯಲ್ಲಿ ಇಬ್ಬರು ಪ್ರಾಣಾಪಾದಿಂದ ಪಾರಾಗಿದ್ದಾರೆ.

ಅಡುಗೆ ಕೆಲಸಕ್ಕೆಂದು ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಕುರಪ್ಪಲ್ಲಿ ಗ್ರಾಮದ ಬಳಿಯ ಬಾವಿಗೆ ಕಾರು ಬಿದ್ದಿದೆ.
ಬಾವಿ ಆಳವಾಗಿದ್ದರಿಂದ ಕಾರೊನೊಳಗೆ ಮೂವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಸ್ಥಳೀಯರು, ಪೊಲೀಸರು ಸೇರಿ ಬಾವಿಯಲ್ಲಿ ಬಿದ್ದಿದ್ದ ಕಾರನ್ನು ಮೇಲಕ್ಕೆತ್ತಿದರು.

ಅಡುಗೆ ಕೆಲಸಕ್ಕಾಗಿ ಕಾರಿನಲ್ಲಿ ಒಟ್ಟು ಐವರು ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಚಿಂತಾಮಣಿ ಮೂಲಕ ಐವರು ಮೃತಪಟ್ಟಿದ್ದಾರೆ. ಇನ್ನುಳಿದ ಇಬ್ಬರು ಬಚಾವ್ ಆಗಿದ್ದಾರೆ.

ಮೊದಲಿಗೆ ಸ್ಥಳೀಯರು ಹಗ್ಗಗಳನ್ನು ಕಟ್ಟಿ ಕಾರನ್ನು ಮೇಲೆತ್ತಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಿಲ್ಲ. ಬಳಿಕ ಕ್ರೇನ್​ ಮೂಲಕ ಬಾವಿಯೊಳಗಿದ್ದ ಕಾರನ್ನು ಹೊರತೆಗೆಯಲಾಗಿದೆ.

ಪ್ರಚಾರಕ್ಕಾಗಿ ‘ಆಪರೇಷನ್ ಸಿಂದೂರ್’ ವಿಷಯ ಬಳಸಿಕೊಂಡ ವೈದ್ಯ ಅಮಾನತ್ತು..! ತನಿಖೆಗೆ ಸಮಿತಿ ರಚಿಸಿದ ಆಸ್ಪತ್ರೆ..!

19 ಸಾವಿರ ಕೋಟಿ ಸಾಲದ ಹಣ ಬಿಡುಗಡೆಗೂ ಮುನ್ನ ಪಾಕ್‌ ಗೆ 11 ಷರತ್ತು ವಿಧಿಸಿದ IMF..! ಭಾರತದ ಒತ್ತಡಕ್ಕೆ ಮಣಿಯಿತೇ ಐ.ಎಂ.ಎಫ್..?

ಖ್ಯಾತ ಗಾಯಕಿ ಅರ್ಚನಾ ಉಡುಪ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರಾ..? ಈ ಬಗ್ಗೆ ಆಕೆ ಹೇಳಿದ್ದೇನು..?

See also  ಸುಳ್ಯ: ಕಾರು ಮತ್ತು ಲಾರಿ ಡಿಕ್ಕಿ, ಕಾರಿನ ಮುಂಭಾಗ ಜಖಂ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget