ಕೊಡಗು

ಮಡಿಕೇರಿ:ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿಯಾಗಿ ಪಲ್ಟಿ..!ಚಾಲಕನಿಗೇನಾಯ್ತು?

ನ್ಯೂಸ್‌ ನಾಟೌಟ್:  ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು (Car) ಟ್ರಾನ್ಸ್ ಫಾರ್ಮರ್ ಗೆ ಅಳವಡಿಸಿದ್ದ ವಿದ್ಯುತ್ ಕಂಬಕ್ಕೆ (Electricity Pole) ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಬಗ್ಗೆ ವರದಿಯಾಗಿದೆ.ಮಡಿಕೇರಿ ಸಮೀಪದ ಪೊನ್ನಂಪೇಟೆ – ಕಾನೂರು ನಡುವಿನ ಮುಗುಟಗೇರಿ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.ಮುಂದಕ್ಕೆ ಚಲಿಸುತ್ತಿದ್ದ ಕಾರು ಏಕಾಏಕಿ ಎಡಕ್ಕೆ ತಿರುಗಿ ಟ್ರಾನ್ಸ್ ಫಾರ್ಮರ್ ಅಳವಡಿಸಿದ್ದ ಕಂಬದೊಳಗೆ ಸಿಲುಕಿ ಮಗುಚಿಕೊಂಡಿದೆ. 

ಕಾರು ಚಾಲಕ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ತಕ್ಷಣ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದರಿಂದ ಅನಾಹುತ ತಪ್ಪಿದೆ. ಘಟನೆ ಸಂಬಂಧಿಸಿದಂತೆ ಗೋಣಿಕೋಪ್ಪ (Gonikoppa) ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ರೋಚಕ ತಿರುವಿನತ್ತ ಸಾಗಿದ ವಿರಾಜಪೇಟೆ ಕ್ಷೇತ್ರ

ಭಾಗಮಂಡಲ ಮೇಲೇತ್ಸುವೆ ಮಳೆಗಾಲದಲ್ಲಿ ಸಾರ್ವಜನಿಕ ಬಳಕೆಗೆ ಸಿಗುವುದಿಲ್ಲ..? ಮತ್ತೆ ಕೊಡಗಿನ ಏಕೈಕ ಮೇಲ್ಸೇತುವೆ ಕಾಮಗಾರಿ ವಿಳಂಬ?

ಕೊಡಗು: ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ಬುಧವಾರವೂ ರಜೆ, ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಘೋಷಣೆ