ನ್ಯೂಸ್ ನಾಟೌಟ್: ರಸ್ತೆಯೊಂದರಲ್ಲಿ ಕಾರಿನ ಮಾಲೀಕ ಹಾಗೂ ಟ್ರಾಫಿಕ್ ಪೊಲೀಸರ ನಡುವೆ ನಡೆದ ಸಂಭಾಷಣೆಯ ವಿಡಿಯೋ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಕಾರುಗಳಿಗೆ ಕಪ್ಪು ಗ್ಲಾಸ್ ಗಳನ್ನು ಅಳವಡಿಸುವಂತಿಲ್ಲ. ಇದಕ್ಕೆ ನಾನು ದಂಡ ಹಾಕಬೇಕಿತ್ತು ಆದರೆ ಈ ಬಾರಿ ನಾಯಿ ಮುಖ ನೋಡಿ ನಿಮ್ಮನ್ನು ಹೋಗಲು ಬಿಡುತ್ತಿದ್ದೇನೆ ಎಂದು ಟ್ರಾಫಿಕ್ ಪೊಲೀಸ್ ಹೇಳಿರುವ ಮಾತು ವೈರಲ್ ಆಗುತ್ತಿದೆ.
ಮಧ್ಯಪ್ರದೇಶದಲ್ಲಿ ಘಟನೆ ನಡೆದಿದ್ದು, ಟ್ರಾಫಿಕ್ ಪೊಲೀಸ್ ಅನ್ನು ವಿವೇಕಾನಂದ್ ತಿವಾರಿ ಎಂದು ಗುರುತಿಸಲಾಗಿದೆ. ಮಾರ್ಚ್ 23 ರಂದು ಘಟನೆ ನಡೆದಿದೆ.
ನನಗೆ ನಾಯಿ ಕಂಡರೆ ಭಯ ಎಂದು ಪೊಲೀಸರು ಮಾಲೀಕನ ಬಳಿಕ ಬೆರಳು ಮಾಡಿ ತೋರಿಸಿ ಮಾತನಾಡುತ್ತಿರುವಾಗ ಅದು ಬೊಗಳುತ್ತಿರುವುದು ಕಂಡಿದೆ, ಇದಕ್ಕೆ ಪೊಲೀಸ್ ತಮಾಷೆಯಾಗಿ ಮಾತನಾಡಿದ್ದಾರೆ ಮತ್ತು ಟ್ರಾಫಿಕ್ ರೂಲ್ಸ್ ಬಗ್ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
Want to avoid getting caught by traffic police? Own a dog! 🐕😂
pic.twitter.com/p3mbdRmdOK— Jeet Shah (@MostlyMomentum_) March 23, 2025
ಇದು ಸುಪ್ರೀಂಕೋರ್ಟ್ನ ಆದೇಶವಾಗಿರುವುದರಿಂದ ಯಾವುದೇ ಕಾರಣಕ್ಕೆ ಬ್ಲ್ಯಾಕ್ ಗ್ಲಾಸ್ ನ್ನು ಕಾರಿಗೆ ಅಳವಡಿಸಬೇಡಿ, ಕೂಡಲೇ ಅದನ್ನು ತೆಗೆದುಹಾಕಿ ಎಂದು ಪೊಲೀಸ್ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಇದನ್ನೂ ಓದಿ: ಸಿನಿಮಾ ರೂಪದಲ್ಲಿ ಬರುತ್ತಿದೆ ಯೋಗಿ ಆದಿತ್ಯನಾಥ್ ಜೀವನ ಚರಿತ್ರೆ..! ಪೋಸ್ಟರ್ ಅನಾವರಣ