ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಕಾರು ಓಡಿಸಿ ಇಬ್ಬರನ್ನು ಕೊಂದ ಉದ್ಯಮಿ ಪುತ್ರನಿಗೆ ರಾಜಮರ್ಯಾದೆ..! ಕೋರ್ಟ್‌ನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾದ ಪೊಲೀಸ್..!

ನ್ಯೂಸ್ ನಾಟೌಟ್: ಇಬ್ಬರಿಗೆ 3 ಕೋಟಿ ಮೌಲ್ಯದ ಪೋರ್ಷೆ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ ಪ್ರಕರಣದಲ್ಲಿ 15 ಗಂಟೆಗಳೊಳಗೆ ನ್ಯಾಯಾಲಯಅಪ್ರಾಪ್ತ ಆರೋಪಿಗೆ ಜಾಮೀನು ನೀಡಿ ಅಪಘಾತದ ಬಗ್ಗೆ ಪ್ರಬಂಧ ಬರೆಯುವಂತೆ ಷರತ್ತು ವಿದಿಸಿತ್ತು. ನಂತರ ಇದೀಗ ಪೊಲೀಸರು ಈ ಆದೇಶದ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಕೃತ್ಯ ನಡೆದ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿತ್ತಾದರೂ ಆರೋಪಿ ಪ್ರಭಾವಿ ಆಗಿದ್ದರಿಂದ ನ್ಯಾಯಾಲಯವು ಅಂದೇ ವಿಚಿತ್ರ ಷರತ್ತು ವಿಧಿಸಿ ಜಾಮೀನು ನೀಡಿತ್ತು ಎನ್ನಲಾಗಿದೆ. ಆ ಷರತ್ತುಗಳೆಂದರೆ, ಅಪಘಾತದ ಕುರಿತಂತೆ 300 ಪದಗಳ ಪ್ರಬಂಧ ಬರೆಯುವುದು, 15 ದಿನಗಳ ಕಾಲ ಟ್ರಾಫಿಕ್ ಪೊಲೀಸರೊಂದಿಗೆ ಕೆಲಸ ಮಾಡುವುದು ಮತ್ತು ಆತನ ಕುಡಿತದ ಚಟ ಬಿಡಿಸಲು ಕೌನ್ಸೆಲಿಂಗ್ ಪಡೆಯುವುದು ಆಗಿತ್ತು ಎನ್ನಲಾಗಿತ್ತು. ನ್ಯಾಯಾಲಯದ ಈ ತೀರ್ಪು ವ್ಯಾಪಕ ಟ್ರೋಲ್, ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನೂ ಅಚ್ಚರಿಯ ಸಂಗತಿ ಎಂದರೆ ಇಬ್ಬರನ್ನು ಕೊಂದ ಅಪ್ರಾಪ್ತನಿಗೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಬಿರಿಯಾನಿ ಕೊಟ್ಟು ಸತ್ಕರಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಇದೀಗ ಈ ತೀರ್ಪಿನ ವಿರುದ್ಧ ಪೊಲೀಸರು ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಆರೋಪಿ, 17 ವರ್ಷದ ಬಾಲಕನನ್ನು ವಯಸ್ಕನಂತೆ ಪರಿಗಣಿಸಲು ಬಾಂಬೆ ಹೈಕೋರ್ಟ್‌ನಿಂದ ಅನುಮತಿ ಪಡೆಯುವುದಾಗಿ ಪೊಲೀಸರು ಸೋಮವಾರ(ಮೇ.20) ಹೇಳಿದ್ದಾರೆ.

Related posts

ಅರಣ್ಯಾಧಿಕಾರಿಗಳು ಜಿಂಕೆ, ಕಾಡುಕೋಣದ ಕೊಂಬು ವಶಕ್ಕೆ ಪಡೆದದ್ದೆಲ್ಲಿ..? ಆ ವ್ಯಕ್ತಿಯ ಬಂಧನವನ್ನು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಡೆದದ್ದೇಕೆ?

ಮನೆ ಮಾಲೀಕನ ಕುತ್ತಿಗೆಗೆ ಹರಿತವಾದ ಲಾಂಗ್ ಇಟ್ಟು ಬೆದರಿಸಿ ಚಿನ್ನ,ನಗದು ದೋಚಿ ಪರಾರಿ;ಮೂವರು ಕಳ್ಳರಲ್ಲಿ ಸಿಕ್ಕಿ ಬಿದ್ದ ಓರ್ವ ಕಳ್ಳ..!ಮುಂದೇನಾಯ್ತು?

ಲೈಂಗಿಕ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ 300 ಜನರ ವಿರುದ್ಧ ಎಫ್‌.ಐ.ಆರ್..! ಪ್ರಾಂಶುಪಾಲರು, ತರಗತಿ ಶಿಕ್ಷಕಿ ಹಾಗೂ ಮಹಿಳಾ ಅಟೆಂಡರ್‌ ಅಮಾನತ್ತು.!