ಕರಾವಳಿಸುಳ್ಯ

ಸುಳ್ಯ:ಕಾರು- ಬೈಕ್ ಡಿಕ್ಕಿ;ಅಪಘಾತ ಸಂತ್ರಸ್ತರಿಗೆ ವೆಚ್ಚ ಭರಿಸುತ್ತೇನೆ ಎಂದವನು ಮಂಗಮಾಯ..!ಠಾಣೆ ಮೆಟ್ಟಿಲೇರಿದ ದಂಪತಿ

224

ನ್ಯೂಸ್‌ ನಾಟೌಟ್‌ :ಕಾರು ಮತ್ತು ಬೈಕ್ ಡಿಕ್ಕಿಯಾಗಿ ದಂಪತಿಗೆ ಗಾಯವಾಗಿರುವ ಘಟನೆ ಸುಳ್ಯ ಹಳೆಗೇಟಿನಲ್ಲಿ ಫೆ.24ರಂದು ಸಂಭವಿಸಿತ್ತು.ಕೂಡಲೇ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.ಆದರೆ ಕಾರು ಚಾಲಕ ಚಿಕಿತ್ಸೆ ವೆಚ್ಚದ ಭರವಸೆಯನ್ನು ದಂಪತಿಗೆ ನೀಡಿದರಾಗಿದ್ದರೂ ಬಳಿಕ ಇದಕ್ಕೆ ಸ್ಪಂದನೆ ನೀಡದ ಪರಿಣಾಮ ಕಾರು ಚಾಲಕನ ವಿರುದ್ದ ದಂಪತಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ಬಗ್ಗೆ ವರದಿಯಾಗಿದೆ.

ಪೇರಾಲು ನಿವಾಸಿ ಮಹೇಶ್ ಎಂಬುವವರು ತಮ್ಮ ಪತ್ನಿಯನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಫೆ.24 ರಂದು ಮಧ್ಯಾಹ್ನ ಸುಳ್ಯದಿಂದ ತಮ್ಮ ಮನೆ ಪೇರಾಲು ಕಡೆಗೆ ಹೋಗುತ್ತಿದ್ದರು.ಈ ಸಂದರ್ಭ ಹಳೆಗೇಟು ತಿರುಮಲ ಹೋಂಡಾ ಶೋ ರೂಂ ಬಳಿ ಪುತ್ತೂರು ಕಡೆಯಿಂದ ವೇಗವಾಗಿ ಬಂದ ಕಾರು ಇವರ ಬೈಕಿಗೆ ಡಿಕ್ಕಿ ಹೊಡೆದಿದೆ.ಈ ವೇಳೆ ಬೈಕಿನಲ್ಲಿದ್ದ ಪತಿ-ಪತ್ನಿ ಇಬ್ಬರೂ ರಸ್ತೆಗೆ ಬಿದ್ದು ಇಬ್ಬರಿಗೂ ಗಾಯಗಳಾಗಿತ್ತು.

ತಕ್ಷಣ ಅವರಿಬ್ಬರನ್ನು ಸ್ಥಳೀಯ ಆಟೋ ಚಾಲಕರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು.ಈ ವೇಳೆ ಕಾರಿನ ಚಾಲಕ ಜೊತೆಯಲ್ಲಿದ್ದು ಚಿಕಿತ್ಸೆಯ ವೆಚ್ಚವನ್ನು ಭರಿಸುವ ಭರವಸೆಯನ್ನು ನೀಡಿದ್ದರು.ಆದರೆ ಡಿಸ್ಚಾರ್ಜ್ ವೇಳೆ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದ ಪರಿಣಾಮ ಕಾರು ಚಾಲಕ ಕೇರಳ ಮೂಲದ ಸುರೇಂದ್ರ ಹೆಗಡೆ ಎಂಬವರ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಮಹೇಶ್ ರವರು ದೂರು ನೀಡಿದ್ದಾರೆ.

See also  ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮೀಸಲಾತಿ ಬೇಕೇ? ಬೇಡವೇ?, ಒಕ್ಕಲಿಗರ ಸಂಖ್ಯೆ ಜಾಸ್ತಿ ಇದ್ದರೂ ಮೀಸಲಾತಿ ಏಕೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget