ಅಟೋಮೊಬೈಲ್ಇತರವೈರಲ್ ನ್ಯೂಸ್

ಶೀಘ್ರದಲ್ಲೇ ಮಾರುಕಟ್ಟೆಗೆ ಬರುತ್ತಿದೆ ಹೊಸ ವರ್ಷನ್ ಸ್ವಿಫ್ಟ್ ಕಾರ್..! ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಕಾರಿನಲ್ಲಿ ಏನೇನಿದೆ..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

251

ನ್ಯೂಸ್ ನಾಟೌಟ್ : ಕಾರು ಉತ್ಪಾದಕ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಸಂಪಾದಿಸಿರುವ ಮಾರುತಿ ಸುಜುಕಿ ಕಂಪನಿ ತಮ್ಮ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡುತ್ತಿದೆ. ಹೊಸ ತಲೆಮಾರಿನ ಜನರಿಗಾಗಿ ಮಾರುತಿ ಸ್ವಿಫ್ಟ್ ಕಾರು ಇದೀಗ ಭಾರಿ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ಹೊಸ ತಲೆಮಾರಿನ ಸ್ವಿಫ್ಟ್ ಮಾದರಿಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಬಿಡುಗಡೆ ಮಾಡಿರುವ ಸುಜುಕಿ ಕಂಪನಿಯು ಪ್ರಮುಖ ಬದಲಾವಣೆಗಳೊಂದಿಗೆ ದೇಶಿಯ ಮಾರುಕಟ್ಟೆಗೂ ಪರಿಚಯಿಸುತ್ತಿದ್ದು, ಹೊಸ ಕಾರು ಈ ತಿಂಗಳಾಂತ್ಯಕ್ಕೆ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಬಹುದಾಗಿದೆ. ಸ್ವಿಫ್ಟ್ ಹೊಸ ಮಾದರಿಯು ಈ ಬಾರಿ ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಇದರಲ್ಲಿ ಐಷಾರಾಮಿ ಲುಕ್ ಹೊಂದಿರುವ ಹೊರ ಭಾಗದ ವಿನ್ಯಾಸದೊಂದಿಗೆ ಕಾರಿನ ಒಳಭಾಗದಲ್ಲೂ ಹಲವಾರು ಸುಧಾರಿತ ಫೀಚರ್ಸ್ ಗಳನ್ನು ನೀಡಲಾಗಿದೆ. ಹೊಸ ಕಾರಿನಲ್ಲಿ ಈ ಬಾರಿ 16 ಇಂಚಿನ ಅಲಾಯ್ ವ್ಹೀಲ್ಸ್, ಎಲ್ಇಡಿ ಹೆಡ್ ಲೈಟ್ಸ್ ಮತ್ತು ಟೈಲ್ ಲೈಟ್ಸ್ ಜೊತೆ ಎಲ್ಇಡಿ ಡಿಆರ್ ಎಲ್ಎಸ್ ನೀಡಲಾಗಿದ್ದು, ಕಾರಿನ ಒಳಭಾಗದಲ್ಲಿ 9 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ವೈರ್ ಲೇಸ್ ಆಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೇರಿದಂತೆ ಹಲವಾರು ಫೀಚರ್ಸ್ ನೀಡಲಾಗಿದೆ.

ಹೊಸ ಸ್ವಿಫ್ಟ್ ನಲ್ಲಿ ಈ ಬಾರಿ ಜೆಡ್ ಸೀರಿಸ್ ನಲ್ಲಿರುವ ಜೆಡ್12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು ಪ್ಯೂರ್ ಪೆಟ್ರೋಲ್ ಮತ್ತು ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. ಇದು ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಪ್ಯೂರ್ ಪೆಟ್ರೋಲ್ ಮಾದರಿಯು 82 ಹಾರ್ಸ್ ಪವರ್ ಮತ್ತು 108 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಮೈಲ್ಡ್ ಹೈಬ್ರಿಡ್ ಮಾದರಿಯು ಪ್ಯೂರ್ ಪೆಟ್ರೋಲ್ ಮಾದರಿಗಿಂತ ಹೆಚ್ಚುವರಿಯಾಗಿ 3 ಹಾರ್ಸ್ ಪವರ್ ಮತ್ತು 60 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ವಿಫ್ಟ್ ಹೊಸ ಮಾದರಿಯ ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಪ್ರತಿ ಲೀಟರ್ ಗೆ 23.04 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಸ್ವಿಫ್ಟ್ ಮಾದರಿಯು ಪ್ರತಿ ಲೀಟರ್ ಗೆ 24.05 ಕಿ.ಮೀ ಮೈಲೇಜ್ ನೀಡಲಿದ್ದು, ಇದು ಸುರಕ್ಷತೆಯಲ್ಲೂ ಗಮನ ಸೆಳೆಯಲಿದೆ. ಹೊಸ ಕಾರಿನಲ್ಲಿ ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್ ಸೇರಿದಂತೆ ಹಲವಾರು ಸೌಲಭ್ಯಗಳಿರಲಿವೆ. ಹೀಗಾಗಿ ಹೊಸ ಕಾರು ಸದ್ಯದ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ. ಆರಂಭಿಕ ಮಾದರಿಯಲ್ಲೂ ಹಲವಾರು ಫೀಚರ್ಸ್ ನೋಡಬಹುದಾಗಿದೆ.

  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget