ಕರಾವಳಿಕ್ರೈಂ

ಪೆರಿಂಜೆಯಲ್ಲಿ ರಿಕ್ಷಾ-ಕಾರು ಭೀಕರ ಅಪಘಾತ: ಐವರು ಪ್ರಯಾಣಿಕರು ಗಂಭೀರ

ನ್ಯೂಸ್ ನಾಟೌಟ್: ವೇಣೂರು-ಮೂಡುಬಿದಿರೆ ರಾಜ್ಯ ಹೆದ್ದಾರಿ ಪೆರಿಂಜೆ ಬಂಡಸಾಲೆ ಬಳಿ ಸೋಮವಾರ ಸಂಜೆ ಕಾರು ಮತ್ತು ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿಯಾಗಿ ರಿಕ್ಷಾದಲ್ಲಿದ್ದ ಚಾಲಕ ಸೇರಿದಂತೆ ಐವರು ಗಂಭೀರ ಗಾಯಗೊಂಡಿದ್ದಾರೆ.

ಆಟೋ ರಿಕ್ಷಾ (KA 20-AA7956 ) ಮೂಡುಬಿದಿರೆ ಕಡೆಯಿಂದ ವೇಣೂರು ಕಡೆಗೆ ಬರುತ್ತಿದ್ದ ವೇಳೆ ಪೆರಿಂಜೆ ಬಂಡಸಾಲೆ ಬಳಿ ವೇಣೂರು ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಹಾಗೂ ಆಟೋ ರಿಕ್ಷಾ ಪಲ್ಟಿಯಾಗಿ ಜಖಂಗೊಂಡಿದೆ. ರಿಕ್ಷಾ ಚಾಲಕ ಮತ್ತು ಅದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮತ್ತು ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇದರಲ್ಲಿ ಓರ್ವ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ. ಕಾರಿನಲ್ಲಿ ಚಾಲಕ ಸೇರಿ ಮೂವರು ಪ್ರಯಾಣಿಸುತ್ತಿದ್ದು, ಯಾವುದೇ ಗಾಯಗಳಾಗಿಲ್ಲ. ಕಾರು ಚಾಲಕ ತುಮಕೂರಿನ ಪ್ರಸಾದ್ ವಿರುದ್ಧ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಮಂಗಳೂರು: ಭೂವಿಜ್ಞಾನಿ ಮನೆಗೆ ಲೋಕಾಯುಕ್ತ ದಾಳಿ..! ನಗದು-ಚಿನ್ನ ವಶಕ್ಕೆ

10ನೇ ತರಗತಿ ಬಾಲಕ ಸೇರಿ ಜತೆಯಲ್ಲಿ ಮಲಗಿದ್ದ 4 ಮಂದಿ ಸ್ನೇಹಿತರು ಸುಟ್ಟು ಕರಕಲು..! ಟೈಲರ್‌ ಗಳಾಗಿ ದುಡಿಯುತ್ತಿದ್ದ ಯುವಕರ ದುರಂತ ಅಂತ್ಯ..!

ಅಕ್ರಮ ಸಾಹಸ ಕ್ರೀಡಾ ಕಂಪನಿಯ ಎಡವಟ್ಟಿಗೆ 2 ಸಾವು..! ಪ್ಯಾರಾಗ್ಲೈಡಿಂಗ್ ವೇಳೆ ಕಂದಕಕ್ಕೆ ಬಿದ್ದ ಪ್ರವಾಸಿ ಮಹಿಳೆ..!