ಕ್ರೈಂಬೆಂಗಳೂರು

ಹೊತ್ತಿ ಉರಿದ 8 ಜನರಿದ್ದ ಕಾರು..!15 ವರ್ಷದ ಹುಡುಗಿ ಸಜೀವ ದಹನ, ಆ ರಾತ್ರಿ ನಡೆದ್ದೇನು..?

ನ್ಯೂಸ್ ನಾಟೌಟ್: ಸಹೋದರನ ಮನೆಯಿಂದ ಊಟ ಮುಗಿಸಿ ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಹುಡುಗಿಯೊಬ್ಬಳು ಸುಟ್ಟು ಕರಕಲಾದ ದಾರುಣ ಘಟನೆ ಬೆಂಗಳೂರಿನ ನೆಲಮಂಗಲದ ಮಾದಾವರ ಬಳಿ ಎ.೨೧ ರಾತ್ರಿ ನಡೆದಿದೆ. ಬೆಂಗಳೂರು- ತುಮಕೂರು ಹೈವೆಯ ಮಾದಾವರ ಟೋಲ್ ಬಳಿ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಓಮ್ನಿ ಕಾರಿಗೆ ಬಲೆನೋ ಕಾರು ಹಿಂಬದಿಯಿಂದ ಡಿಕ್ಕಿಯೊಡೆದ ಪರಿಣಾಮ ಓಮ್ನಿ‌ಕಾರು ಪಲ್ಟಿಯಾಗಿ ಬೆಂಕಿಗಾಹುತಿಯಾಗಿದೆ. ಕಾರಿನಲ್ಲಿ ಒಟ್ಟು 8 ಜನ ಪ್ರಯಾಣ ಮಾಡುತ್ತಿದ್ದರು ಎಂದು ವರದಿ ತಿಳಿಸಿದೆ. ಏಳು ಜನಕ್ಕೆ ಸುಟ್ಟ ಗಾಯಗಳಾಗಿದ್ರೇ 15 ವರ್ಷದ ಹುಡುಗಿಯೊಬ್ಬಳು ಸಜೀವ ದಹನವಾಗಿದ್ದಾಳೆ. ಓಮ್ನಿ ಕಾರಿನಲ್ಲಿ ಪ್ರಯಾಣ ಮಾಡ್ತಿದ್ದ 8 ಜನರಲ್ಲಿ ದಿವ್ಯಾ ಸಾವನ್ನಪ್ಪಿದ್ರೆ ಮಾಯಾಂಕ್, ಮಂಜುಳ, ಸುನಿತಾ, ತರುಣ್, ಮಹೇಶ್, ನಮನ್ ಹಾಗೂ ಶಾಂತಿಲಾಲ್ ಗಾಯಾಳುಗಳಾಗಿದ್ದಾರೆ. ಇವರಲ್ಲಿ ನಮನ್, ಸುನಿತಾ, ಮಾಯಾಂಕ್ ಸ್ಥಿತಿ ಗಂಭೀರವಾಗಿದೆ.

ಮಾದಾವರದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳುಗಳೆಲ್ಲರೂ ಗುಜರಾತಿ ಮೂಲದ ಕುಟುಂಬದವರು ಎನ್ನಲಾಗಿದೆ. ತುಮಕೂರು ರಸ್ತೆ ಹೈವೇಯಲ್ಲಿ 10ಗಂಟೆ ರಾತ್ರಿಯಲ್ಲಿ ಘಟನೆ ನಡೆದಿದೆ. ಬಲೆನೋ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಮುಂದಿದ್ದ ಕಾರು ಎರಡು ಮೂರು ಪಲ್ಟಿ ಆಗಿದ್ದು ನಂತರ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ.

Related posts

58 ವರ್ಷದ ಮಹಿಳೆಯ ಮೇಲೆ 16 ವರ್ಷದ ಬಾಲಕನಿಂದ ಅತ್ಯಾಚಾರ! ನಿಗೂಢ ಕಾರಣಕ್ಕಾಗಿ ಸೇಡು ತೀರಿಸಿಕೊಂಡನೇ ಬಾಲಕ ?

ಮಿಸ್ಡ್ ಕಾಲ್ ಕೊಟ್ಟು ಹುಡುಗರನ್ನು ಪಟಾಯಿಸುತ್ತಿದ್ದ ವಿವಾಹಿತೆ ಅರೆಸ್ಟ್..! ಕೊರಿಯರ್ ಬಾಯ್ ನಿಂದ ಬಯಲಾಯ್ತು ಹನಿಟ್ರ್ಯಾಪ್ ದಂಧೆ..!

ಮಡಿಕೇರಿ:ಭೀಕರ ಬೈಕ್ ಅಪಘಾತ,ಕಾಲೇಜ್ ವಿದ್ಯಾರ್ಥಿನಿ ದಾರುಣ ಅಂತ್ಯ