ಕ್ರೈಂ

ಅರಂತೋಡಿನಲ್ಲಿ ಕಾರುಗಳ ನಡುವೆ ಭೀಕರ ಅಪಘಾತ

ನ್ಯೂಸ್ ನಾಟೌಟ್ : ಅರಂತೋಡಿನಲ್ಲಿ ಇಂದು ಬೆಳಗ್ಗೆ ಎರಡು ಕಾರುಗಳ ನಡುವೆ ಮುಖಾಮುಖಿ ಭೀಕರ ಅಪಘಾತ ನಡೆದಿದೆ.

ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಾರಿಗೆ ಸಂಪಾಜೆ ಕಡೆಯಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದುಕೊಂಡಿವೆ. ವೇಗದ ಚಾಲನೆ. ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಅಪಘಾತದಿಂದಾಗಿ ಎರಡೂ ಕಾರುಗಳ ಮುಂಭಾಗ ಪುಡಿಪುಡಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಬಿಜೆಪಿ ಶಾಸಕನಿಂದ ಕಾಂಗ್ರೆಸ್ ಅಭ್ಯರ್ಥಿಗೆ ಮತ..! ಎಸ್​ಟಿ ಸೋಮಶೇಖರ್ ವಿರುದ್ಧ ಕಾನೂನು ಕ್ರಮ..!

ವಿಎ ಆಗಿದ್ದ ಪತಿ ಅಪಘಾತದಲ್ಲಿ ನಿಧನ,ಅನುಕಂಪದ ಆಧಾರದ ಮೇಲೆ ಎಸ್‌ಡಿಸಿ ಹುದ್ದೆ ಅಲಂಕರಿಸಿದ್ದ ಪತ್ನಿ ಆತ್ಮಹತ್ಯೆ

4ರ ಬಾಲಕ ಮೇಲೆ ಹರಿದ ಕಾರು..! ಮನೆ ಮುಂದೆಯ ರಸ್ತೆಯಲ್ಲಿ ಆಡುತ್ತಿದ್ದ ಮಗುವಿನ ದೇಹ ಛಿದ್ರ-ಛಿದ್ರ..!